PG AYUSH-2024 ಕೋರ್ಸುಗಳ ಪ್ರವೇಶಕ್ಕೆ ಅರ್ಹರಿಂದ KEA ಆನ್ ಲೈನ್ ನಲ್ಲಿ ಅರ್ಜಿ ಆಹ್ವಾನಿಸಿದೆ. ಅ.24ರ ಸಂಜೆ 4ಗಂಟೆ ಒಳಗೆ ಅರ್ಜಿ ಸಲ್ಲಿಸಬೇಕು. ಅದೇ ದಿನ 6 ಗಂಟೆ ಒಳಗೆ ನೋಂದಣಿ ಶುಲ್ಕ ಪಾವತಿಸಬೇಕು. ದಾಖಲಾತಿ ಪರಿಶೀಲನೆ ಇತ್ಯಾದಿ ಮಾಹಿತಿಗೆ ಆಗಾಗ್ಗೆ ವೆಬ್ಸೈಟ್ ಗೆ ಭೇಟಿ ನೀಡುತ್ತಿರಿ ಎಂದು ಹೇಳಲಾಗಿದೆ.
AACCC, ಆಯುಷ್ ಸಚಿವಾಲಯ ನವದೆಹಲಿ ಇವರ ಮಾರ್ಗದರ್ಶಿ ಸೂತ್ರಗಳ ಅನ್ವಯ ಸರ್ಕಾರವು ತನ್ನ ಆದೇಶ ದಂತೆ, ಆಯುರ್ವೇದ, ಯುನಾನಿ ಮತ್ತು ಹೋಮಿಯೋಪತಿ ಸ್ನಾತಕೋತ್ತರ ಪದವಿ ಕೋರ್ಸ್ ಗಳ ಪ್ರವೇಶಕ್ಕೆ 2024ರಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ನಡೆಸಲು ಪ್ರಾಧಿಕಾರಕ್ಕೆ ಆದೇಶಿಸಿದೆ.