ಎರಡನೇ ಹಂತದ ಶೂಟಿಂಗ್ ಪ್ರಾರಂಭಿಸಿದ ‘ಅಯೋಗ್ಯ 2’ ಚಿತ್ರತಂಡ 18-01-2025 5:35PM IST / No Comments / Posted In: Featured News, Live News, Entertainment ಮಹೇಶ್ ಕುಮಾರ್ ನಿರ್ದೇಶನದ ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಅಭಿನಯದ ‘ಅಯೋಗ್ಯ’ 2018ರಲ್ಲಿ ಬಿಡುಗಡೆಯಾಗಿ ಸೂಪರ್ ಡೂಪರ್ ಹಿಟ್ ಆಗಿತ್ತು, ಇದೀಗ ಇದರ ಮುಂದುವರೆದ ಭಾಗ ‘ಅಯೋಗ್ಯ 2’ ಆಗಸ್ಟ್ ತಿಂಗಳಲ್ಲಿ ತೆರೆ ಮೇಲೆ ಬರಲು ಸಿದ್ಧವಾಗಿದೆ. ಚಿತ್ರತಂಡ ಈಗಾಗಲೇ ಅತಿ ವೇಗವಾಗಿ ಮೊದಲನೇ ಹಂತದ ಶೂಟಿಂಗ್ ಕಂಪ್ಲೀಟ್ ಮಾಡಿದ್ದು, ಎರಡನೇ ಹಂತವನ್ನು ಪ್ರಾರಂಭಿಸಿದೆ. ಈ ಕುರಿತು ನಟ ಸತೀಶ್ ನೀನಾಸಂ ತಮ್ಮ instagram ನಲ್ಲಿ ತಿಳಿಸಿದ್ದಾರೆ. ಈ ಚಿತ್ರವನ್ನು svc ಫಿಲಂಸ್ ಬ್ಯಾನರ್ ನಲ್ಲಿ ಮುನೇಗೌಡ ನಿರ್ಮಾಣ ಮಾಡಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣ, ಮಾಸ್ತಿ ಉಪ್ಪಾರಳ್ಳಿ ಸಂಭಾಷಣೆ, ಸುರೇಶ್ ಅರುಮುಗಂ ಅವರ ಸಂಕಲನವಿದೆ. ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಸೇರಿದಂತೆ ಅರುಣಾ ಬಾಲರಾಜ್, ಮಂಜು ಪಾವಗಡ, ಸುಂದರ್ ರಾಜ್, ಶಿವರಾಜ್ ಕೆಆರ್ ಪೇಟೆ, ತೆರೆ ಹಂಚಿಕೊಂಡಿದ್ದಾರೆ. View this post on Instagram A post shared by Sathish Ninasam (@sathish_ninasam_official)