alex Certify BIG NEWS: 2023ರಲ್ಲಿ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ ʼರಾಮ ಮಂದಿರʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 2023ರಲ್ಲಿ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ ʼರಾಮ ಮಂದಿರʼ

ಬಹುನಿರೀಕ್ಷಿತ ಅಯೋಧ್ಯೆ ರಾಮ ಮಂದಿರವು 2023ರಿಂದ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ ಎಂದು ಮಂದಿರ ನಿರ್ಮಾಣ ಪರಿಶೀಲನಾ ಸಭೆಯಲ್ಲಿ ಹೇಳಲಾಗಿದೆ.

ಈ ಪರಿಶೀಲನಾ ಸಭೆಯಲ್ಲಿ ರಾಮಮಂದಿರ ಟ್ರಸ್ಟ್​ನ ಖಜಾಂಚಿ ಸ್ವಾಮಿ ಗೋವಿಂದದೇವ್​ ಗಿರಿ, ಪ್ರಧಾನ ಕಾರ್ಯದರ್ಶಿ ಚಂಪತ್​ ರೈ, ಸದಸ್ಯರಾದ ವಿಮಲೇಂದ್ರ ಮೋಹನ್​​ ಪ್ರತಾಪ್​ ಮಿಶ್ರಾ ಹಾಗೂ ಅನಿಲ್​ ಮಿಶ್ರಾ, ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ, ಟಾಟಾ ಕನ್ಸಲ್ಟಿಂಗ್​ ಇಂಜಿನಿಯರ್​ಗಳು, ಲರ್ಸನ್​ ಹಾಗೂ ಟೂಬ್ರೋಗಳ ಅಧಿಕಾರಿಗಳು ಭಾಗಿಯಾಗಿದ್ದರು.

ಆಗಸ್ಟ್​ 27 – 29ರಲ್ಲಿ ನಡೆದ ಸಭೆಯ ನಂತರ ಈ ಪ್ರಕಟಣೆ ಹೊರಡಿಸಲಾಗಿದ್ದು ಇದರ ಪ್ರಕಾರ ದೇವಾಲಯ ನಿರ್ಮಾಣ ಕಾರ್ಯವು ವೇಳಾಪಟ್ಟಿಯಂತೆಯೇ ನಡೆಯುತ್ತಿದೆ. 2023ರ ವೇಳೆಗೆ ಭಕ್ತರು ಶ್ರೀರಾಮನ ದರ್ಶನ ಪಡೆಯಬಹುದು ಎಂದು ಅಂದಾಜಿಸಲಾಗಿದೆ.

ರಾಮಮಂದಿರ ಟ್ರಸ್ಟ್​ ದೇವಾಲಯದ ರಚನಾತ್ಮಕ ದೀರ್ಘಾಯುಷ್ಯಕ್ಕೆ ಬದ್ಧವಾಗಿದೆ. ಮಣ್ಣು ಪರೀಕ್ಷೆ ವರದಿಯಲ್ಲಿ ನೆಲಮಟ್ಟದಿಂದ 12 ಮೀಟರ್​ ಆಳದಲ್ಲಿ ಭಗ್ನಾವಶೇಷಗಳು ಕಂಡು ಬಂದಿದ್ದರಿಂದ ರಚನಾತ್ಮಕ ಸ್ಥಿರತೆ ಬಗ್ಗೆ ಖಾತರಿ ನೀಡುವುದು ದೊಡ್ಡ ಸವಾಲೇ ಆಗಿತ್ತು ಎಂದು ಟ್ರಸ್ಟ್​ ಹೇಳಿದೆ.

12 ಮೀಟರ್​ ಆಳದಲ್ಲಿ ಉತ್ಖನನ ಮಾಡಿ ಭಗ್ನಾವಶೇಷಗಳನ್ನು ತೆಗೆದು ಅಡಿಪಾಯವನ್ನು ರೋಲರ್​ ಕಾಂಪ್ಯಾಕ್ಟ್​​ ಕಾಂಕ್ರೀಟ್​ನಿಂದ ತುಂಬಿಸಲಾಗಿತ್ತು. ಉತ್ಖನನ ಮಾಡಿದ ಜಾಗವನ್ನು ನಿಗದಿತ ಸಮಯದಲ್ಲಿ ಭರ್ತಿ ಮಾಡಲಾಗಿದೆ. ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಕಚ್ಛಾ ವಸ್ತುಗಳ ಖರೀದಿಯಲ್ಲಿ ಸಹಕಾರ ನೀಡಿವೆ.

ಲಾರ್ಸನ್​, ಟುಬ್ರೋ ಹಾಗೂ ಟಾಟಾ ಕನ್ಸಲ್ಟಿಂಗ್​ ಇಂಜಿನಿಯರ್​ಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಟ್ರಸ್ಟ್​ ಹೇಳಿದೆ. ಉತ್ಖನನ ಮಾಡಿದ ಪ್ರದೇಶವನ್ನು 48 ಪದರಗಳಲ್ಲಿ ರೋಲರ್​ ಕಾಂಪ್ಯಾಕ್ಟ್​​ ಕಾಂಕ್ರೀಟ್​​ನಿಂದ ತುಂಬಿಸಲಾಗಿದೆ. ಪ್ರತಿಯೊಂದು ಇಂಜಿನಿಯರ್ಡ್ ಫಿಲ್​ ಪದರವಾದ 250 ಮಿಲಿಮೀಟರ್​​ ದಪ್ಪವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...