ನವದೆಹಲಿ: ರಾಮ ಮಂದಿರ ಉದ್ಘಾಟನೆ ಮತ್ತು ಪ್ರತಿಷ್ಠಾಪನಾ ಸಮಾರಂಭಕ್ಕೆ ಅಯೋಧ್ಯೆಯಲ್ಲಿ ಭರದ ಸಿದ್ದತೆ ನಡೆಯುತ್ತಿದೆ.
ಕಾರ್ಯಕ್ರಮದ ಬಗ್ಗೆ ಮಾತನಾಡಿದ ನಟಿ ಮತ್ತು ಬಿಜೆಪಿ ನಾಯಕಿ ಹೇಮಾ ಮಾಲಿನಿ, “ಅಯೋಧ್ಯೆಯಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿವೆ, ಅನೇಕ ಹೋಟೆಲ್ ಗಳು ತಲೆ ಎತ್ತಲಿದೆ . ಈ ಹಿಂದೆ ಅಯೋಧ್ಯೆಯಲ್ಲಿ ಯಾವುದೇ ಉತ್ತಮ ಹೋಟೆಲ್ ಗಳು ಇರಲಿಲ್ಲ ಆದರೆ ನಾನು ಇಲ್ಲಿಗೆ ಬಂದು ನಾನು ಹಲವು ಬೃಹತ್ ಹೋಟೆಲ್ ಗಳನ್ನು ನೋಡಿದೆ. ಅಯೋಧ್ಯೆ ದೊಡ್ಡ ಪ್ರವಾಸಿ ತಾಣವಾಗಲಿದೆ ಎಂದು ಹೇಳಿದರು.