ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಲು ಸಾಧ್ಯವಿಲ್ಲ. ಅದೇ ಕಾರಣಕ್ಕೆ ಆಯಾ ಪ್ರದೇಶದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ತಮ್ಮ ಮನೆಯಲ್ಲೇ ರಾಮಲಲ್ಲಾನ ಪೂಜೆ ಮಾಡಲು ಅನೇಕರು ನಿರ್ಧರಿಸಿದ್ದಾರೆ. ದೇವರ ಮನೆಯಲ್ಲೊಂದು ರಾಮಲಲ್ಲಾ ಮೂರ್ತಿಯನ್ನಿಷ್ಟು ಪೂಜೆ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ. ನೀವೂ ರಾಮನ ಭಕ್ತರಾಗಿದ್ದು, ರಾಮಲಲ್ಲಾ ಮೂರ್ತಿಯನ್ನು ಮನೆಗೆ ತರುವ ಆಲೋಚನೆಯಲ್ಲಿದ್ದರೆ ಅದಕ್ಕೆ ಸಂಬಂಧಿಸಿದ ನಿಯಮಗಳ ಬಗ್ಗೆ ತಿಳಿದುಕೊಳ್ಳಿ.
ನೀವು ರಾಮಲಲ್ಲಾ ಮೂರ್ತಿಯನ್ನು ದೇವರ ಮನೆಯಲ್ಲಿ ಇಡುತ್ತಿದ್ದರೆ ನಿಮ್ಮ ದೇವರ ಮನೆ ಯಾವ ದಿಕ್ಕಿನಲ್ಲಿದೆ ಎಂಬುದನ್ನು ನೋಡಿ. ಯಾವಾಗ್ಲೂ ಈಶಾನ್ಯ ಭಾಗದಲ್ಲಿ ದೇವರ ಮನೆ ಇರಬೇಕು. ನೀವು ಸರಿಯಾದ ದಿಕ್ಕಿನಲ್ಲಿ ದೇವರ ಮೂರ್ತಿಯಿಟ್ಟು ಪೂಜೆ ಮಾಡಿದ್ರೆ ಮಾತ್ರ ನಿಮಗೆ ಪೂಜೆ ಫಲ ಸಿಗುತ್ತದೆ.
ಜನವರಿ 22ರಂದು ಮನೆಯಲ್ಲಿ ರಾಮಲಲ್ಲಾನ ಪೂಜೆ ಮಾಡ್ತಿದ್ದರೆ ಆ ದಿನ ಮಾಂಸಹಾರ ಸೇವನೆ ಮಾಡಬೇಡಿ. ಮದ್ಯ ಸೇವನೆ ಅಥವಾ ಯಾವುದೇ ಮಾದಕ ಪದಾರ್ಥಗಳ ಸೇವನೆ ಕೂಡ ಮಾಡಬಾರದು.
ಸ್ವಚ್ಛತೆ ಬಗ್ಗೆಯೂ ನೀವು ಕಾಳಜಿ ವಹಿಸಬೇಕು. ದೇವರ ಮನೆಯಲ್ಲಿ ಕೊಳಕು ಇರದಂತೆ ನೋಡಿಕೊಳ್ಳಿ. ದೇವರ ಪೂಜೆಗೆ ಅಗತ್ಯವಿರುವ ವಸ್ತುಗಳನ್ನು ಬಿಟ್ಟು ಅನಗತ್ಯ ವಸ್ತುಗಳನ್ನು ಅಲ್ಲಿ ಇಡಬೇಡಿ. ಇದ್ರಿಂದ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆ.
ರಾಮಲಲ್ಲಾನ ಪೂಜೆಯನ್ನು ಮಾಡುವ ಮೊದಲು ಸ್ನಾನ ಮಾಡಬೇಕು. ಶುದ್ಧ ಬಟ್ಟೆಯನ್ನು ಧರಿಸಿ ನಂತ್ರ ಸಂಕಲ್ಪ ಮಾಡಿ ಪೂಜೆ ಮಾಡಬೇಕು. ನೀವು ಪಂಡಿತರನ್ನು ಕರೆಸಿ ಅವರಿಂದ ಪೂಜೆ ಮಾಡಿಸುವುದು ಸೂಕ್ತ. ಪೂಜೆಯಲ್ಲಿ ಯಾವುದೇ ವಿಘ್ನವಾಗದಂತೆ ನೋಡಿಕೊಳ್ಳಿ.