ಅಯೋಧ್ಯೆ: ‘ಅಖಿಲ್ ಭಾರತೀಯ ಮಾಂಗ್ ಸಮಾಜ’ಕ್ಕೆ ಸೇರಿದ ರಾಮನ ಭಕ್ತರು 1.751 ಕೆಜಿ ತೂಕದ ಬೆಳ್ಳಿ ಪೊರಕೆಯನ್ನು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ದಾನ ಮಾಡಿದರು.
ಈ ಭಕ್ತರು ಪೊರಕೆಯನ್ನು ಗರ್ಭ ಗೃಹವನ್ನು ಸ್ವಚ್ಛಗೊಳಿಸಲು ಬಳಸಬೇಕೆಂದು ವಿನಂತಿಸಿದ್ದಾರೆ.
ಭಕ್ತರು ಬೆಳ್ಳಿ ಪೊರಕೆಯನ್ನು ಎತ್ತರಕ್ಕೆ ಎತ್ತಿ ಹಾರಗಳಿಂದ ಅಲಂಕರಿಸಿ ಮೆರವಣಿಗೆಯನ್ನು ಮುನ್ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಉತ್ತರ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಶೀತ ಅಲೆಗಳ ನಡುವೆಯೂ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ್ ಲಲ್ಲಾನ ದರ್ಶನಕ್ಕಾಗಿ ಭಕ್ತರು ರಾಮಪಥದಲ್ಲಿ ಜಮಾಯಿಸಿದ್ದರು.
ದೇವಸ್ಥಾನದ ಟ್ರಸ್ಟ್ನ ಹೊಸ ಸಮಯದ ಪ್ರಕಾರ, ರಾಮಲಲ್ಲಾ ವಿಗ್ರಹದ ಶೃಂಗಾರ ಆರತಿಯು ಬೆಳಿಗ್ಗೆ 4:30 ಕ್ಕೆ ನಡೆಯಲಿದ್ದು, 6:30 ಕ್ಕೆ ಮಂಗಳ ಪ್ರಾರ್ಥನೆಯನ್ನು ನೆರವೇರಿಸಲಾಗುತ್ತದೆ. ನಂತರ ಬೆಳಗ್ಗೆ 7 ಗಂಟೆಯಿಂದಲೇ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.