ಬಾಬರಿ ಮಸೀದಿ ಧ್ವಂಸಗೊಳಿಸಿದ 29ನೇ ವರ್ಷಾಚರಣೆಯ ಪ್ರಯುಕ್ತ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಾರೀ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.
1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕೆಡವಲಾಗಿತ್ತು. ರಾಮ ಮಂದಿರ ನಿರ್ಮಾಣದ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಬಾಬರಿ ಧ್ವಂಸದ ಆಚರಣೆ ನಡೆಯುವುದಿಲ್ಲವೆಂದು ಹೇಳಲಾಗಿದೆ.
ಆದರೂ ಸಹ ಯಾವುದೇ ರೀತಿಯ ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಡದೇ ಇರಲೆಂದು ಅಯೋಧ್ಯೆಯ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಜುಲೈ 2020ರಲ್ಲಿ ಅಯೋಧ್ಯೆ ವಿವಾದಕ್ಕೆ ಅಂತ್ಯ ಸಿಕ್ಕಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ರಾಮ ಜನ್ಮಭೂಮಿ ಕಾಂಪ್ಲೆಕ್ಸ್ ನೀಡಲಾಗಿದೆ. ಇದಕ್ಕೆ ಪ್ರತಿಯಾಗಿ ಸುನ್ನಿ ಕೇಂದ್ರ ವಕ್ಫ್ ಮಂಡಳಿಗೆ ಮಸೀದಿ ಕಟ್ಟಿಕೊಳ್ಳಲು ಐದು ಎಕರೆ ಜಮೀನು ನೀಡಲಾಗಿದೆ.
ರಾಮ ಮಂದಿರದ ನಿರ್ಮಾಣವು ಸದ್ಯ ಜಾರಿಯಲ್ಲಿದ್ದು, ಮಂದಿರ ನಿರ್ಮಾಣಕ್ಕೆ ರಾಮ ಮಂದಿರ ಟ್ರಸ್ಟ್ ನಿಧಿ ಸಂಗ್ರಹಿಸುತ್ತಿದೆ. ಮಸೀದಿ ನಿರ್ಮಾಣ ಮಾಡಲು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಜಾರಿಗೊಳಿಸಿರುವ ನಕ್ಷೆಯ ಅಂತಿಮ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ.