ಅಯೋಧ್ಯೆ: ಅಯೋಧ್ಯೆಯ ಭವ್ಯ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮಲಲ್ಲ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೆರವೇರಿದ್ದು, ಸಂಜೆ ಸರಯೂ ನದಿ ತೀರ ಸೇರಿದಂತೆ ಹಲವು ಕಡೆ ದೀಪೋತ್ಸವ ಆಚರಿಸಲಾಗಿದೆ.
ಅಯೋಧ್ಯ ನಗರದ ನೂರಕ್ಕೂ ಅಧಿಕ ದೇವಾಲಯಗಳಲ್ಲಿ ಶ್ರೀ ರಾಮನ ಹೆಸರಲ್ಲಿ ದೀಪ ಬೆಳಗಿಸುವ ಮೂಲಕ ದೀಪಾವಳಿ ಆಚರಿಸಲಾಗಿದೆ.
ದೇಶಾದ್ಯಂತ ರಾಮ ದೀಪೋತ್ಸವ ಸಂಭ್ರಮ ಮನೆ ಮಾಡಿದೆ. ಅಂತೆಯೇ ಅಯೋಧ್ಯೆಯಲ್ಲಿ ಶ್ರೀರಾಮಲಲ್ಲ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಯೋಧ್ಯೆಯ ದೇಗುಲಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ದೀಪೋತ್ಸವ ನಡೆಸಲಾಗಿದೆ.
ಉತ್ತರ ಪ್ರದೇಶ ಸರ್ಕಾರದಿಂದ ದೀಪೋತ್ಸವ ಆಯೋಜಿಸಲಾಗಿದೆ. ಅಯೋಧ್ಯೆಯ ರಾಮಲಲ್ಲ, ಕನಕ ಭವನ, ಹನುಮಾನ್ ಗಡಿ, ಗುಪ್ತರ ಘಾಟ್, ಲತಾ ಮಂಗೇಶ್ಕರ್ ವೃತ್ತ, ಸರಯೂ ನದಿ ತೀರ, ಮಣಿರಾಮದಾಸ ಕಂಟ್ರೋನ್ಮೆಂಟ್, ಪ್ರಮುಖ ರಸ್ತೆಗಳು ಸಾರ್ವಜನಿಕ ಸ್ಥಳಗಳು ಸೇರಿ 100 ಕ್ಕೂ ಅಧಿಕ ಸ್ಥಳಗಳಲ್ಲಿ ದೀಪೋತ್ಸವ ಆಚರಿಸಲಾಗಿದೆ.