ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ, ಬಾಲ ರಾಮನ ಮೂರ್ತಿ ದರ್ಶನ ಪಡೆಯಲು ರಾಜ್ಯದ ಭಕ್ತರಿಗೆ ಅನುಕೂಲವಾಗುವಂತೆ 11 ವಿಶೇಷ ರೈಲುಗಳು ಕಾರ್ಯಾಚರಣೆ ನಡೆಸಲಿವೆ.
ಫೆಬ್ರವರಿಯಲ್ಲಿ ಸಂಚಾರ ಆರಂಭವಾಗಲಿದ್ದು, ಆನ್ಲೈನ್ ಬುಕಿಂಗ್ ಗೆ ಮಾತ್ರ ಅವಕಾಶ ಇರುತ್ತದೆ. ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ ರೈಲು ಸೇವೆಯನ್ನು ದೇಶಾದ್ಯಂತ ಒದಗಿಸಲು ರೈಲ್ವೆ ಇಲಾಖೆ ಮುಂದಾಗಿದೆ. ರಾಜ್ಯದಿಂದ 11 ರೈಲುಗಳನ್ನು ಅಯೋಧ್ಯೆಗೆ ಬಿಡಲಾಗುವುದು. ಕರ್ನಾಟಕ -ಗೋವಾದಿಂದ ಎರಡು ರೈಲುಗಳು, ಕರ್ನಾಟಕದಿಂದ ಅಯೋಧ್ಯೆಗೆ ನೇರವಾಗಿ 9 ರೈಲುಗಳು ಸಂಚರಿಸಲಿವೆ.
ಈ ವಿಶೇಷ ರೈಲುಗಳಿಗೆ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ನೀಡುವುದಿಲ್ಲ. ಜನವರಿ 31ರ ನಂತರ ಐಆರ್‌ಸಿಟಿಸಿ ವೆಬ್ ಸೈಟ್ ನಲ್ಲಿ ಆನ್ಲೈನ್ ಮೂಲಕ ಟಿಕೆಟ್ ಬುಕಿಂಗ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಅಯೋಧ್ಯೆ ರೈಲು ನಿಲ್ದಾಣದಲ್ಲಿ ಎಷ್ಟು ರೈಲುಗಳ ನೆರಳು ಕಡೆಗೆ ಸಾಮರ್ಥ್ಯವಿದೆ ಎಂಬುದರ ಆಧಾರದ ಮೇಲೆ ಯಾವ ರಾಜ್ಯಗಳಿಂದ ಎಷ್ಟು ರೈಲುಗಳಿಗೆ ಅವಕಾಶ ಕಲ್ಪಿಸಬೇಕೆಂದು ಪರಿಶೀಲನೆ ನಡೆಸಲಾಗಿದೆ. ಕರ್ನಾಟಕದಿಂದ 11 ರೈಲುಗಳ ಕಾರ್ಯಾಚರಣೆಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.