ಶ್ರೀ ರಾಮ ನಗರಿ ಅಯೋಧ್ಯೆಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ದೀಪಾವಳಿ ಅಂಗವಾಗಿ ಅಯೋಧ್ಯೆಯಲ್ಲಿ ಅದ್ದೂರಿ ದೀಪೋತ್ಸವ ಏರ್ಪಡಿಸಲಾಗಿದೆ.
25 ಲಕ್ಷ ದೀಪಗಳಿಂದ ರಾಮನಗರ ಅಯೋಧ್ಯೆ ಕಂಗೊಳಿಸಿದೆ. ರಾಮ್ ಕಿ ಪೈಡಿಯ 51 ಘಾಟ್ ಗಳಲ್ಲಿ 24 ಲಕ್ಷ ಹಣತೆ ಹಚ್ಚಲಾಗಿದೆ. ಒಟ್ಟು 25 ಲಕ್ಷ ದೀಪ ಬೆಳಗುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಲಾಗಿದ್ದು, ದೀಪೋತ್ಸವದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದಾರೆ. ಸರಯೂ ಆರತಿ ನೆರವೇರಿಸಿದ್ದಾರೆ.