ದೇಶದಲ್ಲಿ ಭಾಷೆಗಳ, ಧರ್ಮಗಳ, ಆಚರಣೆಗಳ ವೈವಿಧ್ಯತೆಯನ್ನು ಎಲ್ಲ ಸಂಘ-ಸಂಸ್ಥೆಗಳು ಗೌರವಿಸುತ್ತಿರುವ ನಡುವೆಯೇ ಲಿಂಗ ವೈವಿಧ್ಯತೆಯನ್ನು ಕೂಡ ಗೌರವಿಸಲು ಬ್ಯಾಂಕ್‍ಗಳು ನಿರ್ಧರಿಸಿವೆ.
ಅದರ ಭಾಗವಾಗಿ ಪ್ರತಿಷ್ಠಿತ ಖಾಸಗಿ ಬ್ಯಾಂಕ್ ‘ಆ್ಯಕ್ಸಿಸ್ ಬ್ಯಾಂಕ್’ ತನ್ನ ಹೊಸ ನೀತಿಗಳ ರಚನೆ ಮಾಡಿದ್ದು ತೃತೀಯ ಲಿಂಗಿ-ಸಲಿಂಗಿ ಗ್ರಾಹಕರು ಮತ್ತು ಸಿಬ್ಬಂದಿಗೆ ಅನುಕೂಲಕರ ವಾತಾವರಣ ನಿರ್ಮಿಸಲು ಮುಂದಾಗಿದೆ.
ಎಲ್‍ಜಿಬಿಟಿಕ್ಯುಐಎ+ ಸಮುದಾಯದವರು ಬ್ಯಾಂಕ್ ಖಾತೆಯಲ್ಲಿ ನಾಮಿನಿ (ವಾರಸುದಾರ) ಸ್ಥಳದಲ್ಲಿ ತಮ್ಮ ಮಿತ್ರರ ಹೆಸರನ್ನು ಹಾಕಬಹುದಾಗಿದೆ. ಸಲಿಂಗಿ ಜೋಡಿಯು ಜಂಟಿಯಾಗಿ ಉಳಿತಾಯ ಖಾತೆ, ಟರ್ಮ್ ಠೇವಣಿಗಳನ್ನು ಕೂಡ ತೆರೆಯಬಹುದಾಗಿದೆ. ‘ಕಮ್ ಆ್ಯಸ್ ಯೂ ಆರ್’ ಎಂದು ಪರಿಷ್ಕೃತ ಪಾಲಿಸಿಗೆ ಬ್ಯಾಂಕ್ ಹೆಸರಿಟ್ಟಿರುವುದು ಗಮನಾರ್ಹ. ಸೆ.20ರಿಂದ ಹೊಸ ನೀತಿಗಳು ಜಾರಿಗೆ ಬರಲಿವೆ.
ಹಿರಿಯ ನಾಗರಿಕರಿಗೆ ಇಲ್ಲಿದೆ ಒಂದು ʼನೆಮ್ಮದಿʼ ಸುದ್ದಿ
ಮೆಡಿಕ್ಲೇಮ್ ಸೌಲಭ್ಯಕ್ಕೆ ಸಲಿಂಗಿಗಳು ತಮ್ಮ ಜೋಡಿಯ ಹೆಸರನ್ನು ನಮೂದಿಸಬಹುದಾಗಿದೆ. 2018ರಂದು ಸುಪ್ರೀಂಕೋರ್ಟ್ ನೀಡಿದ್ದ ಐತಿಹಾಸಿಕ ತೀರ್ಪಿನಲ್ಲಿ, ಖಾಸಗಿಯಾಗಿ ಒಪ್ಪಿತ ರೀತಿಯಲ್ಲಿ ಯುವಕ-ಯುವತಿಯರು ಇರಿಸಿಕೊಳ್ಳುವ ಲೈಂಗಿಕ ಸಂಬಂಧವನ್ನು ಅಪರಾಧ ಎನ್ನಲಾಗದು ಎಂದಿತ್ತು. ಸಂಗಾತಿಯನ್ನು ಲಿಂಗದ ಆಧಾರದ ಮೇಲೆ ಒಂದೇ ನಿರ್ಧರಿಸಲಾಗದು. ಹಾಗಾಗಿ ಸಲಿಂಗಿಗಳು, ತೃತೀಯ ಲಿಂಗಿಗಳನ್ನು ಅಪರಾಧಿಗಳನ್ನಾಗಿ ನೋಡುವುದು ಸರಿಯಲ್ಲ ಎಂದು ಹೇಳಿತ್ತು.
ಸದ್ಯ ಬ್ಯಾಂಕ್‍ಗಳು ಎಲ್‍ಜಿಬಿಟಿಗಳಿಗಾಗಿಯೇ ರಚಿಸಿರುವ ನೀತಿ ಪ್ರಕಾರ, ಅರ್ಜಿ ಸಲ್ಲಿಕೆ ವೇಳೆ ‘ಎಂಎಕ್ಸ್’ ಎಂದು ಶೀರ್ಷಿಕೆಯಲ್ಲಿ ನಮೂದಿಸಿದರೆ ಸಾಕು, ಅವರಿಗೂ ಸಾಮಾನ್ಯರಂತೆ ಎಲ್ಲ ಸೌಲಭ್ಯ ಸಿಗಲಿದೆ. ಇನ್ನು, ಬ್ಯಾಂಕಿನ ಸಿಬ್ಬಂದಿ ಎಲ್‍ಜಿಬಿಟಿ ಸಮುದಾಯದವರಾಗಿದ್ದಲ್ಲಿ ಅವರಿಗೆ ಪ್ರತ್ಯೇಕ ಶೌಚಾಲಯವನ್ನು ಕೂಡ ನಿರ್ಮಿಸಲು ಬ್ಯಾಂಕ್ ಆಡಳಿತ ಮಂಡಳಿ ಮುಂದಾಗಿದೆ.