alex Certify ರೇಷನ್, ಆಧಾರ್ ಕಾರ್ಡ್, ಜಾತಿ ಪತ್ರ ಸೇರಿ ಕೇಂದ್ರ, ರಾಜ್ಯ ಸರ್ಕಾರ ಯೋಜನೆ ಸೌಲಭ್ಯ ಪಡೆಯಲು ದೇಶದಾದ್ಯಂತ ‘ಪಿಎಂ-ಜನ್ ಮನ್’ ಪೇಸ್ 2 ಕಾರ್ಯಕ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೇಷನ್, ಆಧಾರ್ ಕಾರ್ಡ್, ಜಾತಿ ಪತ್ರ ಸೇರಿ ಕೇಂದ್ರ, ರಾಜ್ಯ ಸರ್ಕಾರ ಯೋಜನೆ ಸೌಲಭ್ಯ ಪಡೆಯಲು ದೇಶದಾದ್ಯಂತ ‘ಪಿಎಂ-ಜನ್ ಮನ್’ ಪೇಸ್ 2 ಕಾರ್ಯಕ್ರಮ

ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ವತಿಯಿಂದ ಪ್ರಧಾನಮಂತ್ರಿ ಜನಜಾತಿಯ ಆದಿವಾಸಿ ನ್ಯಾಯ ಮಹಾ ಯೋಜನೆಯಡಿ(ಪಿಎಂ-ಜನ್‍ಮನ್) ಕಾರ್ಯಕ್ರಮಗಳನ್ನು ಪಿವಿಟಿಜಿ ಸಮುದಾಯವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಪ್ರಯೋಜನ ಪಡೆಯಲು ದೇಶದಾದ್ಯಂತ ಪಿಎಂ-ಜನ್‍ಮನ್ ಪೇಸ್ 2(PMJANMAN Phase-II) ಕಾರ್ಯಕ್ರಮದಡಿ ಅರಿವು ಮೂಡಿಸುವ ಶಿಬಿರ/ಫಲಾನುಭವಿಗಳ ಸ್ಯಾಚುರೇಷನ್ ಕ್ಯಾಂಪ್‍ಗಳನ್ನು ಸೆಪ್ಟೆಂಬರ್ 10 ರವರೆಗೆ ವಿಸ್ತರಿಸಲಾಗಿದೆ.

ಕೊಡಗು ಜಿಲ್ಲೆಯ ಬುಡಕಟ್ಟು ಸಮುದಾಯವಾದ ಜೇನುಕುರುಬ ಸಮುದಾಯದವರಿಗೆ ಪಿಎಂ-ಜನ್‍ಮನ್ ಪೇಸ್ 2(PM-JANMAN  phase II) ರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲ್ಲೂಕು/ ಬ್ಲಾಕ್ ನೋಡೆಲ್ ಅಧಿಕಾರಿಗಳ ತಂಡ ರಚಿಸಲಾಗಿದೆ.

ಆಗಸ್ಟ್, 23 ರಿಂದ ಸೆಪ್ಟೆಂಬರ್, 10 ರ ಅವಧಿಯಲ್ಲಿ ಜೇನುಕುರುಬ ಜನಾಂಗದವರಿಗೆ ಆಧಾರ್ ಕಾರ್ಡ್ ನೋಂದಣಿ, ಪಿಎಂ ಜನ್‍ಧನ್ ಬ್ಯಾಂಕ್ ಖಾತೆ, ಆಯುಷ್ಮಾನ್ ಭಾರತ್ ಕಾರ್ಡ್, ಸಿಕೆಲ್‍ಸೆಲ್ ಅನೆಮಿಯಾ ಖಾಯಿಲೆ ಸ್ಕ್ರೀನಿಂಗ್ ಪರೀಕ್ಷೆ, ಜಾತಿ ಪ್ರಮಾಣ ಪತ್ರ, ಪಡಿತರ ಚೀಟಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜೇನುಕುರುಬ ಜನಾಂಗದವರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವುದು.

ಹೆಚ್ಚಿನ ಮಾಹಿತಿಗೆ ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಕೊಡಗು ಜಿಲ್ಲೆ ಇವರ ಕಚೇರಿ ದೂರವಾಣಿ ಸಂಖ್ಯೆ 08272-200500, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ವಿರಾಜಪೇಟೆ ತಾಲ್ಲೂಕು(9901482763) ಹಾಗೂ ಸಹಾಯಕ ನಿರ್ದೇಶಕರು(ಗ್ರೇಡ್-2), ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ ತಾಲ್ಲೂಕು(7259552655) ರವರನ್ನು ಸಂಪರ್ಕಿಸಬಹುದು ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...