ಪ್ರಪಂಚದಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿ ಅಲರ್ಜಿ ಇರುತ್ತೆ. ಕೆಲವರಿಗೆ ಧೂಳು, ಕೆಲವರಿಗೆ ಹಣ್ಣು ಅಥವಾ ತರಕಾರಿ ಮತ್ತೆ ಕೆಲವರಿಗೆ ಆಹಾರದ ಪದಾರ್ಥಗಳ ಅಲರ್ಜಿ ಇರುತ್ತದೆ. ಅಲರ್ಜಿ ಇರುವ ಆಹಾರ ಸೇವನೆ ಮಾಡಿ ಸಾವನ್ನಪ್ಪಿದವರೂ ಇದ್ದಾರೆ. ಆದ್ರೆ ಈ ಹುಡುಗಿಗೆ ವಿಚಿತ್ರ ಅಲರ್ಜಿ ಇದೆ. ಅಳು ಮತ್ತು ದೇಹದ ಬೆವರು ಹುಡುಗಿಗೆ ಅಲರ್ಜಿಯುಂಟು ಮಾಡ್ತಿದೆ.
ಈಕೆಗೆ 11 ವರ್ಷ ವಯಸ್ಸು. ಬಾಲಕಿಯ ಹೆಸರು ಸುಮ್ಮಾ ವಿಲಿಯಮ್ಸ್. ಅವಳು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ವಾಸಿಸುತ್ತಾಳೆ. ಇದೊಂದು ಅಪರೂಪದ ಖಾಯಿಲೆ ಎಂದು ವೈದ್ಯರು ಹೇಳಿದ್ದಾರೆ.
ಸುಮ್ಮಾಗೆ ಮೊದಲ ಬಾರಿ ಈ ಸಮಸ್ಯೆ ಕಾಣಿಸಿಕೊಂಡಾಗ ಅವರ ತಾಯಿ ದಂಗಾಗಿದ್ದರು. ರಾತ್ರಿಯಿಡಿ ಸುಮ್ಮಾ ತೊಂದರೆ ಅನುಭವಿಸಿದ್ದಳು. ನಂತ್ರ ವೈದ್ಯರನ್ನು ಭೇಟಿ ಮಾಡಲಾಯ್ತು. ಆಕೆಗೆ ಮಾತ್ರೆ ನೀಡಲಾಯ್ತು. ವಾಸ್ತವವಾಗಿ ಅತ್ತಾಗ ಸುಮ್ಮಾ ವಿಲಿಯಮ್ಸ್ ಚರ್ಮ ತುಂಬಾ ಒಣಗುತ್ತದೆ. ಇದಾದ ನಂತರ ಮುಖ ಕೆಂಪಾಗುತ್ತದೆ. ನಂತ್ರ ಚರ್ಮ ಬಿರುಕುಬಿಟ್ಟಂತೆ ಕಾಣುತ್ತದೆ. ಸುಮ್ಮಾಗೆ ಡಾನ್ಸ್ ಅಂದ್ರೆ ಬಹಳ ಇಷ್ಟ. ಪ್ರಶಸ್ತಿ ವಿಜೇತೆ ಕೂಡ ಹೌದು. ಆದ್ರೆ ಡಾನ್ಸ್ ಮಾಡುವಾಗ ತುಂಬಾ ಬೆವರೋದ್ರಿಂದ ಆಕೆಗೆ ಸಮಸ್ಯೆಯಾಗುತ್ತದೆ. ಅಲರ್ಜಿಯಿಂದ ವಿಪರೀತ ಉರಿಯಾಗುತ್ತದೆ. ಆಕೆಗೆ ಇಂಜೆಕ್ಷನ್ ಮೂಲಕ ಚಿಕಿತ್ಸೆ ನಡೆಯುತ್ತಿದೆ.