ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ನಮ್ಮ ಕೂದಲು, ಚರ್ಮಕ್ಕೆ ಸಾಕಷ್ಟು ಪ್ರಯೋಜನವಿದೆ. ಇದನ್ನು ಹಾಗೇ ಕೂಡ ತಿನ್ನಬಹುದು ಇಲ್ಲ ಜ್ಯೂಸ್ ಮಾಡಿ ಕುಡಿಯಬಹುದು. ಇದರಲ್ಲಿ ವಿಟಮಿನ್ಸ್ ಹೇರಳವಾಗಿದೆ. ದಿನ ಈ ಹಣ್ಣಿನ ಜ್ಯೂಸ್ ಸೇವಿಸುವುದರಿಂದ ದೇಹಕ್ಕೆ ಎಷ್ಟೆಲ್ಲಾ ಲಾಭವಿದೆ ಎಂಬುದನ್ನು ತಿಳಿಯೋಣ.
ದಾಳಿಂಬೆ ಹಣ್ಣಿನಲ್ಲಿ ಆ್ಯಂಟಿಆಕ್ಸಿಡೆಂಟ್ ಇದೆ. ಹಾಗೇ ಇದನ್ನು ಸೇವಿಸುವುದರಿಂದ ದೇಹದಲ್ಲಿನ ಟಾಕ್ಸಿನ್ ಅನ್ನು ನಿವಾರಿಸುತ್ತದೆ.
ಹಾಲು ಸೇರಿಸಿ ಇದರ ಸ್ಮೂಥಿ ಮಾಡಿಕೊಂಡು ಕುಡಿದರೆ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ದಾಳಿಂಬೆ ಹಣ್ಣು ಸೇವಿಸುವುದರಿಂದ ಕ್ಯಾನ್ಸರ್ ಜೀವಕೋಶಗಳು ನಿವಾರಣೆಯಾಗುತ್ತದೆ.
ಇನ್ನು ಮಧುಮೇಹದವರು ಕೂಡ ಈ ಹಣ್ಣನ್ನು ಸೇವಿಸಬಹುದು. ಇದರಲ್ಲಿ ನೈಸರ್ಗಿಕವಾದ ಸಕ್ಕರೆ ಅಂಶವಿದೆ. ಮಧುಮೇಹದ ನಿಯಂತ್ರಣಕ್ಕೆ ಸಹಾಯಕಾರಿಯಾಗಿದೆ.
ಇನ್ನು ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಶಕ್ತಿ ಹೆಚ್ಚುತ್ತದೆ. ಆಯಾಸ, ಸುಸ್ತು ಕಡಿಮೆಯಾಗುತ್ತದೆ. ಮೂಳೆ, ಹಾಗೂ ಮಾಂಸದ ಸದೃಢಕ್ಕೆ ಇದು ಸಹಾಯ ಮಾಡುತ್ತದೆ.
ಇನ್ನು ಈ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿನ ಕಲ್ಮಶಗಳು ನಿವಾರಣೆಯಾಗುತ್ತದೆ. ಮುಖದ ಕಾಂತಿ ಹೆಚ್ಚುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತದೆ.
ಮಕ್ಕಳಿಗೆ ಈ ಜ್ಯೂಸ್ ಕೊಡುವುದರಿಂದ ಅವರಿಗೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ.