alex Certify ಕಿಡ್ನಿ ಸ್ಟೋನ್ ಸಮಸ್ಯೆಯಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಈ ‘ಆಹಾರ’ ತ್ಯಜಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಡ್ನಿ ಸ್ಟೋನ್ ಸಮಸ್ಯೆಯಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಈ ‘ಆಹಾರ’ ತ್ಯಜಿಸಿ

ಕೆಲವು ಆಹಾರಗಳನ್ನು ತಿನ್ನುವುದರಿಂದ ಕಿಡ್ನಿಯಲ್ಲಿ ಕಲ್ಲುಗಳು ಬೆಳೆಯುತ್ತದೆ. ಈ ಸಮಸ್ಯೆಯಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಈ ಕೆಳಗಿನ ಆಹಾರವನ್ನು ತಿನ್ನದೇ ಇರುವುದು ಒಳಿತು.

ಕ್ಯಾಪ್ಸಿಕಂ: ಕ್ಯಾಪ್ಸಿಕಂನಲ್ಲಿ ಅಧಿಕ ಪ್ರಮಾಣದ ಆಕ್ಸಲೇಟ್ ಕ್ರಿಸ್ಟಲ್ ಇರುತ್ತದೆ. ಇದರಿಂದ ಕ್ಯಾಲ್ಸಿಯಂ ಆಕ್ಸಲೇಟ್ ಕ್ರಿಸ್ಟಲ್ ಗಳು ಬೆಳೆಯುತ್ತವೆ. ಇದೇ ಮುಂದೆ ಕಿಡ್ನಿ ಸ್ಟೋನ್ ಆಗಿ ಪರಿವರ್ತನೆಯಾಗುತ್ತದೆ. ಹಾಗಾಗಿ ಕ್ಯಾಪ್ಸಿಕಂ ಅನ್ನು ಕಡಿಮೆ ಪ್ರಮಾಣದಲ್ಲಿ ತಿನ್ನಬೇಕು.

ಟೊಮಾಟೋ: ಟೊಮಾಟೋ ಬೀಜದಲ್ಲಿ ಅಧಿಕ ಪ್ರಮಾಣದ ಆಕ್ಸಲೇಟ್ ಇರುತ್ತದೆ. ಹಾಗಾಗಿ ಟೊಮಾಟೋ ಬಳಸುವಾಗ ಅದರ ಬೀಜಗಳನ್ನು ತೆಗೆಯುವುದು ಉತ್ತಮ.

ಚಾಕಲೇಟ್ : ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ಆಕ್ಸಲೇಟ್ ಕ್ಯಾಲ್ಸಿಯಂ ಹೊಂದಿರುವ ಚಾಕಲೇಟ್ ಗಳನ್ನು ಕಡಿಮೆ ಸೇವಿಸಬೇಕು.

ಟೀ : ನಿರಂತರವಾಗಿ ಟೀ ಸೇವನೆ ಮಾಡುವುದರಿಂದಲೂ ಸ್ಟೋನ್ ಸಮಸ್ಯೆ ಎದುರಾಗುತ್ತದೆ.

ಸಮುದ್ರ ಆಹಾರ : ಹೆಚ್ಚಿನ ಪ್ರಮಾಣದಲ್ಲಿ ಸಮುದ್ರ ಆಹಾರ ಸೇವನೆ ಒಳ್ಳೆಯದಲ್ಲ. ಇದರಿಂದ ದೇಹದಲ್ಲಿ ಯುರಿಕ್ ಆಮ್ಲ ಹೆಚ್ಚಾಗಿ ಯುರಿಕ್ ಎಸಿಡ್ ಸ್ಟೋನ್ ಉಂಟಾಗುವ ಸಂಭವವಿರುತ್ತದೆ.

ಉಪ್ಪು : ಸ್ಟೋನ್ ಸಮಸ್ಯೆಯಿಂದ ದೂರವಿರಲು ಉಪ್ಪನ್ನು ಕಡಿಮೆ ಸೇವಿಸಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...