![](https://kannadadunia.com/wp-content/uploads/2021/01/e136ad91-0e6f-4c49-be1a-7c3fa742719b.jpg)
ನೀವು ಡಯಟ್ ಪ್ಲಾನ್ ಹಾಕಿಕೊಂಡಿದ್ದರೆ ಈ ಕೆಲವು ತರಕಾರಿಗಳಿಂದ ದೂರವಿರುವುದು ಒಳ್ಳೆಯದು. ಅವುಗಳು ಯಾವುವು ಎಂದಿರಾ?
ಮೊದಲನೆಯದು ಆಲೂಗಡ್ಡೆ. ಇದರ ಸೇವನೆಯಿಂದ ದೇಹ ತೂಕ ಬಹುಬೇಗ ಹೆಚ್ಚುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಿರುವವರು ಇದರಿಂದ ದೂರವಿದ್ದಷ್ಟು ಒಳ್ಳೆಯದು.
ಸ್ವೀಟ್ ಕಾರ್ನ್ ಕೂಡಾ ಬಹುಬೇಗ ತೂಕ ಹೆಚ್ಚಿಸುತ್ತದೆ. ಇದು ಸಾಕಷ್ಟು ಪ್ರಮಾಣದ ಪಿಷ್ಟವನ್ನು ಒಳಗೊಂಡಿರುವುದರಿಂದ ಇದು ರಕ್ತದ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ.
ಕ್ಯಾರೆಟ್ ಕೂಡ ಸಾಕಷ್ಟು ಪ್ರಮಾಣದ ಸಿಹಿಯ ಅಂಶವನ್ನು ಹೊಂದಿದ್ದು ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಇದರಿಂದ ದೂರವಿರುವುದು ಒಳ್ಳೆಯದು.
ಹೂಕೋಸು, ಎಲೆಕೋಸು ಮೊದಲಾದ ತರಕಾರಿಗಳು ಆಮ್ಲೀಯತೆಯನ್ನು ಹೆಚ್ಚಿಸುವುದರಿಂದ ಇವುಗಳನ್ನು ಅಪರೂಪಕ್ಕೊಮ್ಮೆ ಸೇವಿಸಿದರೆ ಸಾಕು. ಅತಿಯಾದ ಬೇಳೆ ಸೇವನೆಯೂ ಅನಗತ್ಯ ಕೊಬ್ಬಿಗೆ ಕಾರಣವಾಗಬಹುದು. ಹೀಗಾಗಿ ದಾಲ್ ವಾರಕ್ಕೊಮ್ಮೆ ಬಳಸಿದರೆ ಸಾಕು.