ನವದೆಹಲಿ: ಪದೇಪದೇ ಸಿಟಿ ಸ್ಕ್ಯಾನ್ ಮಾಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂದು ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ – 19 ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದರೆ ಸಿಟಿ ಸ್ಕ್ಯಾನ್ ಗೆ ಧಾವಿಸಬೇಡಿ ಎಂದು ಸಲಹೆ ನೀಡಿದ್ದಾರೆ. ಪುನರಾವರ್ತಿತ ಸಿಟಿ ಸ್ಕ್ಯಾನ್ ಮಾಡುವುದರಿಂದ ಅಡ್ಡ ಪರಿಣಾಮ ಮತ್ತು ಕ್ಯಾನ್ಸರ್ ಗೆ ತುತ್ತಾಗುವ ಅಪಾಯವಿದೆ ಎಂದು ಅವರು ತಿಳಿಸಿದ್ದಾರೆ.
ಕೊರೋನಾ ಸೌಮ್ಯ ರೋಗಲಕ್ಷಣ ಹೊಂದಿದವರು ಕೂಡ ಮತ್ತೆ ಮತ್ತೆ ಸಿಟಿ ಸ್ಕ್ಯಾನ್ ಮಾಡಿಸಲು ಮುಂದಾಗುತ್ತಿದ್ದಾರೆ. ಇದು ಸರಿಯಲ್ಲ, ಅದರಿಂದ ಪ್ರಯೋಜನವೂ ಇಲ್ಲ. ಸಿಟಿ ಸ್ಕ್ಯಾನ್ ಮತ್ತು ಬಯೋಮಾರ್ಕರ್ ಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಸೌಮ್ಯ ರೋಗಲಕ್ಷಣ ಹೊಂದಿದ್ದರೆ ಸಿಟಿ ಸ್ಕ್ಯಾನ್ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಒಂದು ಸಿಟಿ ಸ್ಕ್ಯಾನ್ 300 ಚೆಸ್ಟ್ ಕ್ಷಕಿರಣ(ಎಕ್ಸ್ –ರೇ) ಗಳಿಗೆ ಸಮನಾಗಿರುತ್ತದೆ. ಇದು ತುಂಬಾ ಹಾನಿಕಾರಕವಾಗಿದೆ ಎಂದು ಅವರು ಹೇಳಿದ್ದಾರೆ.