alex Certify ಪೂಜಾ ಸಮಯದಲ್ಲಿ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೂಜಾ ಸಮಯದಲ್ಲಿ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ವಾಸ್ತು ಶಾಸ್ತ್ರದಲ್ಲಿ ಕೆಲವು ವಸ್ತುಗಳ ಬಗ್ಗೆ ಹೇಳಲಾಗಿದೆ. ಇವುಗಳನ್ನು ಅನುಸರಿಸುವ ಮೂಲಕ ಯಾರಾದರೂ ಸಂತೋಷಕರ ಜೀವನವನ್ನು ನಡೆಸಬಹುದು. ಅಂತೆಯೇ ವಾಸ್ತು ಶಾಸ್ತ್ರದಲ್ಲಿ ಕೆಲವು ತಪ್ಪುಗಳ ಬಗ್ಗೆಯೂ ಹೇಳಲಾಗಿದೆ. ಇವುಗಳನ್ನು ಮಾಡುವುದರಿಂದ ಜೀವನದಲ್ಲಿ ಕಷ್ಟಗಳು ಹೆಚ್ಚಾಗುತ್ತವೆ. ಪೂಜೆಗೆ ಸಂಬಂಧಿಸಿದ ನಿಯಮಗಳ ಪ್ರಕಾರ ಕೆಲವು ವಸ್ತುಗಳನ್ನು ಎಂದಿಗೂ ನೆಲದ ಮೇಲೆ ಇಡಬಾರದು. ಅವು ಯಾವುವು ಎಂದು ಈಗ ತಿಳಿಯೋಣ.

  • ಶಿವಲಿಂಗ: ಶಿವಲಿಂಗವನ್ನು ಶಿವನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶಿವಲಿಂಗದಲ್ಲಿ ಇಡೀ ವಿಶ್ವದ ಶಕ್ತಿ ಇರುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ಪೂಜೆಯ ಸಮಯದಲ್ಲಿ ಅಥವಾ ಇತರ ಸಮಯದಲ್ಲಿ ಶಿವಲಿಂಗವನ್ನು ಖಾಲಿ ನೆಲದ ಮೇಲೆ ಇಡಬಾರದು. ಶಿವಲಿಂಗವನ್ನು ಯಾವಾಗಲೂ ಶುಭ್ರವಾದ ಸ್ಥಳದಲ್ಲಿಯೇ ಇಡಬೇಕು.
  • ವಿಗ್ರಹಗಳು: ಅನೇಕ ಜನರು ವಿಗ್ರಹವನ್ನು ಸ್ವಚ್ಛಗೊಳಿಸುವ ಸಮಯದಲ್ಲಿ ನೆಲದ ಮೇಲೆ ಇಡುತ್ತಾರೆ. ವಿಗ್ರಹವನ್ನು ನೆಲದ ಮೇಲೆ ಇಟ್ಟು ಸ್ವಚ್ಛಗೊಳಿಸಬಾರದು. ಹಾಗೆಯೇ ದೇವಸ್ಥಾನವನ್ನು ಸ್ವಚ್ಛಗೊಳಿಸುವಾಗಲೂ ವಿಗ್ರಹವನ್ನು ನೆಲದ ಮೇಲೆ ಇಡಬಾರದು. ಹೀಗೆ ಮಾಡುವುದರಿಂದ ದೇವರನ್ನು ಅವಮಾನಿಸಿದಂತೆ ಆಗುತ್ತದೆ. ಇದರಿಂದ ಸುಖ ಶಾಂತಿಗಳು ಹಾಳಾಗುತ್ತವೆ.
  • ದೀಪ: ಪೂಜೆಯ ಸಮಯದಲ್ಲಿ ದೀಪವನ್ನು ಬೆಳಗಿಸುವುದು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ವಾಸ್ತು ನಿಯಮದ ಪ್ರಕಾರ ಪೂಜೆಯ ಸಮಯದಲ್ಲಿ ದೀಪವನ್ನು ಬೆಳಗಿಸಿ ಖಾಲಿ ನೆಲದ ಮೇಲೆ ಇಡಬಾರದು. ದೀಪವನ್ನು ಬೆಳಗಿಸಿದ ನಂತರ ಅದರ ಕೆಳಗೆ ಅಕ್ಷತೆಯನ್ನು ಇಡಬೇಕು.
  • ಶಂಖ: ಶಂಖಕ್ಕೆ ವಿಶೇಷ ಮಹತ್ವವಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶಂಖವನ್ನು ಊದುವುದು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಯಾವ ಮನೆಯಲ್ಲಿ ಪೂಜೆಯ ಸಮಯದಲ್ಲಿ ಪ್ರತಿದಿನ ಶಂಖವನ್ನು ಊದುತ್ತಾರೋ ಅಲ್ಲಿ ಲಕ್ಷ್ಮೀದೇವಿ ಯಾವಾಗಲೂ ಇರುತ್ತಾಳೆ. ಶಂಖವನ್ನು ಎಂದಿಗೂ ಖಾಲಿ ನೆಲದ ಮೇಲೆ ಇಡಬಾರದು. ಹೀಗೆ ಮಾಡುವುದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ.
  • ಸಾಲಿಗ್ರಾಮ: ಸಾಲಿಗ್ರಾಮವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಸಾಲಿಗ್ರಾಮವು ವಿಷ್ಣುವಿನ ಸಂಕೇತವಾಗಿದೆ. ಆದ್ದರಿಂದ ವಿಷ್ಣುವಿನ ಪೂಜೆಯಲ್ಲಿ ಸಾಲಿಗ್ರಾಮಕ್ಕೆ ವಿಶೇಷ ಮಹತ್ವ ನೀಡಲಾಗುತ್ತದೆ. ಯಾವ ಮನೆಯಲ್ಲಿ ಸಾಲಿಗ್ರಾಮ ಇರುತ್ತದೋ ಅಲ್ಲಿ ಸುಖ ಸಂತೋಷಗಳು ಬರುತ್ತವೆ. ಆದರೆ ಇದನ್ನು ನೆಲದ ಮೇಲೆ ಇಡುವುದರಿಂದ ನಷ್ಟ ಉಂಟಾಗುತ್ತದೆ. ಸಾಲಿಗ್ರಾಮವನ್ನು ಎಂದಿಗೂ ಖಾಲಿ ನೆಲದ ಮೇಲೆ ಇಡಬಾರದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...