ಎಸಿಡಿಟಿ. ಸದ್ಯ ಎಲ್ಲರ ಬಹುದೊಡ್ಡ ಸಮಸ್ಯೆಯಿದು. ಎಸಿಡಿಟಿ ಅನೇಕ ಅನಾರೋಗ್ಯ ಸಮಸ್ಯೆಗೆ ಕಾರಣವಾಗ್ತಿದೆ. ಆಹಾರ ಹಾಗೂ ಕೆಟ್ಟ ಜೀವನ ಪದ್ಧತಿ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತದೆ. ಹುಳಿ, ಮಸಾಲೆಯುಕ್ತ ಪದಾರ್ಥ, ಕಡಿಮೆ ನೀರು ಸೇವನೆ ಇದಕ್ಕೆ ಮುಖ್ಯ ಕಾರಣ. ಈ ಎಸಿಡಿಟಿಯನ್ನು ಕೆಲ ಮನೆ ಮದ್ದಿನ ಮೂಲಕ ಹೋಗಲಾಡಿಸಬಹುದು.
ಕರ್ಬೂಜ ನೈಸರ್ಗಿಕ ರೀತಿಯಲ್ಲಿ ಎಸಿಡಿಟಿ ಸಮಸ್ಯೆಗೆ ಪರಿಹಾರ ನೀಡುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇದ್ದು, ಇದು ಜೀರ್ಣಕ್ರಿಯೆಯನ್ನು ಉತ್ತಮವಾಗಿರಿಸುತ್ತದೆ. ಆಹಾರದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನೈಸರ್ಗಿಕವಾಗಿ ಅಸಿಡಿಟಿ ಸಮಸ್ಯೆಯಿಂದ ಪರಿಹಾರ ಪಡೆಯಲು ಬಯಸಿದರೆ ಕರ್ಬೂಜ ಸೇವನೆ ಮಾಡಿ.
ಸೌತೆಕಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅನೇಕ ಜನರು ಸಲಾಡ್ ರೀತಿಯಲ್ಲಿ ಸೌತೆಕಾಯಿ ಸೇವನೆ ಮಾಡ್ತಾರೆ. ಇದು ಎಸಿಡಿಟಿ ಸಮಸ್ಯೆಗೆ ಪರಿಹಾರ ನೀಡುತ್ತದೆ. ಇದು ಸಾಕಷ್ಟು ನೀರನ್ನು ಹೊಂದಿರುತ್ತದೆ. ಇದು ದೇಹವನ್ನು ಹೈಡ್ರೀಕರಿಸುತ್ತದೆ. ಇದರ ಸೇವನೆಯಿಂದ ಆಸಿಡ್ ರಿಫ್ಲಕ್ಸ್ ಕಡಿಮೆಯಾಗುತ್ತದೆ.
ಬೆಳಿಗ್ಗೆ ಎಳನೀರು ಕುಡಿಯುವುದರಿಂದ ದೇಹದಲ್ಲಿ ಸಾಕಷ್ಟು ನೀರಿನಾಂಶ ಸೇರುತ್ತದೆ. ಇದರಿಂದಾಗಿ ಎಸಿಡಿಟಿ ಸಮಸ್ಯೆ ಕಡಿಮೆಯಾಗುತ್ತದೆ. ಎಳನೀರಿನಲ್ಲಿ ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್ ಸಮೃದ್ಧವಾಗಿವೆ.
ಬಾಳೆಹಣ್ಣು ಆರೋಗ್ಯಕ್ಕೆ ಪ್ರಯೋಜನಕಾರಿ. ಇದನ್ನು ಸೇವಿಸುವುದರಿಂದ ಎಸಿಡಿಟಿ ಸಮಸ್ಯೆ ಕಡಿಮೆಯಾಗುತ್ತದೆ. ಬಾಳೆಹಣ್ಣು ಆಸಿಡ್ ರಿಫ್ಲಕ್ಸ್ ಹೊಂದಿದೆ. ಕ್ಯಾಲ್ಸಿಯಂ, ಕಬ್ಬಿಣ, ಆಂಟಿ-ಆಕ್ಸಿಡೆಂಟ್ ಮತ್ತು ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ.