
ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಚಿನ್ನದ ಕನಸು ಕನಸಾಗಿಯೇ ಉಳಿದಿದೆ. ಕುಸ್ತಿಯಲ್ಲಿ, ಭಾರತ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯ್ತು. 57 ಕೆಜಿ ಕುಸ್ತಿಯಲ್ಲಿ ರವಿ ದಹಿಯಾ ಬೆಳ್ಳಿ ಪದಕ ಗೆದ್ದಿದ್ದಾರೆ. ಎರಡು ಬಾರಿ ವಿಶ್ವ ಚಾಂಪಿಯನ್ ಆಗಿರುವ ರಷ್ಯಾದ ಜಾವೂರ್ ಯುಗುಯೆವ್ ಜೊತೆ ರವಿ ಫೈನಲ್ ನಲ್ಲಿ ಸೆಣೆಸಾಡಿದ್ರು. ಜಾವೂರ್ ವಿರುದ್ಧ 4-7 ಅಂಕದಿಂದ ರವಿ ಸೋಲುಂಡಿದ್ದಾರೆ.
ನಾಲ್ಕನೇ ಶ್ರೇಯಾಂಕದ ರವಿ ದಹಿಯಾ, ಸೆಮಿಫೈನಲ್‌ನಲ್ಲಿ ಕಜಕಿಸ್ತಾನದ ನುರಿಸ್ಲಾಮ್ ಅವರನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದ್ದರು. ಸೆಮಿಫೈನಲ್‌ನಲ್ಲಿ ರವಿ ಒಂದು ಹಂತದಲ್ಲಿ 8 ಅಂಕಗಳಷ್ಟು ಹಿಂದುಳಿದಿದ್ದರು. ಆದರೆ ಕೊನೆಯ ಕ್ಷಣದಲ್ಲಿ ರವಿ, ನುರಿಸ್ಲಾಮ್ ಸೋಲಿಸಿ ಫೈನಲ್ ಪ್ರವೇಶ ಮಾಡಿ, ಪದಕ ಖಚಿತಪಡಿಸಿಕೊಂಡಿದ್ದರು.