ಕಾಮಿಡಿ ಕಿಂಗ್ ಶರಣ್ ಮತ್ತೆ ಬರ್ತಿದ್ದಾರೆ. ಅಧ್ಯಕ್ಷ, ರ್ಯಾಂಬೋ, ವಿಕ್ಟರಿ ನಂತ್ರ ʼಅವತಾರ ಪುರುಷʼನಾಗಿ ಪ್ರೇಕ್ಷಕರ ಎದುರಿಗೆ ಬರ್ತಿದ್ದಾರೆ. ಶರಣ್ ಸಿನಿಮಾ ಅಂದ್ರೆ ಕಾಮಿಡಿಗೆ ಆದ್ಯತೆ. ಡಿಫರೆಂಟ್ ಸ್ಟೋರಿ ಬಯಸುವವರಿಗೆ ಈ ಚಿತ್ರ ರಸದೌತಣ ನೀಡಲಿದೆ.
ಪುಷ್ಕರ್ ಫಿಲ್ಮ್ಸ್ ಮತ್ತೊಮ್ಮೆ ಹೊಸ ವಿಭಿನ್ನ ಸಿನಿಮಾ ಮೂಲಕ ಪ್ರೇಕ್ಷಕರ ಮನ ಗೆಲ್ಲಲು ಸಿದ್ಧವಾಗಿದೆ. ಸಿನಿಮಾ ಕೂಡ ಕೆಜಿಎಫ್ ಮಾದರಿಯಲ್ಲೇ ಎರಡು ಭಾಗಗಳಲ್ಲಿ ಬರಲಿದೆ. ಶರಣ್ ರಾಜ್ ವೃತ್ತಿ ಜೀವನದಲ್ಲಿಯೇ ಇದು ಅತಿ ಹೆಚ್ಚು ಬಜೆಟ್ ನ ಸಿನಿಮಾ ಆಗಿದೆ.
ಭರ್ಜರಿ ರಿಲೀಸ್ ಗೆ ತಯಾರಿ ಜೋರಾಗಿ ನಡೆದಿದೆ. ನವೆಂಬರ್ ನ ಅಂತ್ಯದಲ್ಲಿ ಸಿನಿಮಾ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ. ದೀಪಾವಳಿಗೆ ಮೊದಲು ಬಿಗ್ ಸರ್ಪ್ರೈಸ್ ಸಿಗಲಿದೆ. ಮೇಕಿಂಗ್ ವಿಡಿಯೋ ರಿಲೀಸ್ ಆಗಲಿದೆ. ಆಶಿಕಾ ರಂಗನಾಥ್ ಹಾಗೂ ಶರಣ್ ರಾಜ್ ಜೋಡಿಯ ಈ ಸಿನಿಮಾದ ಪೋಸ್ಟರ್ ಗಳು ಟೀಸರ್ ಗಳು ಸಖತ್ ಕ್ಯೂರಿಯಾಸಿಟಿ ಹುಟ್ಟುಹಾಕಿವೆ.