
ಬೇಕಾಗುವ ಸಾಮಾಗ್ರಿಗಳು
ಅವಕಾಡೊ ಹಣ್ಣು – 1
ಹಾಲು – 1 ಕಪ್
ಬಾಳೆಹಣ್ಣು – 2
ಕೋಕೊ ಪುಡಿ – 1 ಚಮಚ
ಜೇನುತುಪ್ಪ – 2 ಚಮಚ
ಸಕ್ಕರೆ – 1/2 ಕಪ್
ಏಲಕ್ಕಿ ಪುಡಿ – 1 ಚಿಟಿಕೆ
ನೀರು – 1 ಲೋಟ
ಪಿಸ್ತಾ – 2 ಚಮಚ
ಮಾಡುವ ವಿಧಾನ
ಅವಕಾಡೊ ಹಣ್ಣಿನ ಸಿಪ್ಪೆ ಮತ್ತು ಬೀಜ ತೆಗೆದು ಕತ್ತರಿಸಿ ಮಿಕ್ಸಿಗೆ ಹಾಕಿ. ಜೊತೆಗೆ ಕೋಕೊ ಪುಡಿ, ಜೇನುತುಪ್ಪ, ಹಾಲು, ಬಾಳೆಹಣ್ಣು, ಏಲಕ್ಕಿ ಪುಡಿ ಸೇರಿಸಿ ನಯವಾದ ಪದರ ಬರುವವರೆಗೆ ರುಬ್ಬಿಕೊಳ್ಳಿ.
ನಂತರ ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ನಿಮಗೆ ಬೇಕಾದ ಹದಕ್ಕೆ ತಯಾರಿಸಿಕೊಳ್ಳಿ. ಈ ಅವಕಾಡೊ ಮಿಲ್ಕ್ ಶೇಕ್ ಮತ್ತು 2 ಐಸ್ ಕ್ಯೂಬ್ ಗಳನ್ನು ಗಾಜಿನ ಲೋಟಕ್ಕೆ ಹಾಕಿ ಅದರ ಮೇಲೆ ಹೆಚ್ಚಿದ ಪಿಸ್ತಾ ಉದುರಿಸಿ ಟೇಸ್ಟ್ ಮಾಡಲು ನೀಡಿ.