ಸ್ಯಾಮ್ಸಂಗ್ ಮೊಬೈಲ್ ಗಳು ಹಾಗೂ ಟ್ಯಾಬ್ಲೆಟ್ ಖರೀದಿ ಮಾಡುವವರಿಗೆ ಎಸ್.ಬಿ.ಐ. ಆಕರ್ಷಕ ಕ್ಯಾಶ್ ಬ್ಯಾಕ್ ಆಫರ್‌ಗಳನ್ನು ಮುಂದಿಟ್ಟಿದೆ. ನಿಮ್ಮಲ್ಲಿ ಎಸ್.ಬಿ.ಐ. ಕ್ರೆಡಿಟ್ ಕಾರ್ಡ್ ಇದ್ದರೆ ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ಗಳು ಹಾಗೂ ಟ್ಯಾಬ್ಲೆಟ್‌ಗಳ ಖರೀದಿ ಮೇಲೆ 10% ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶವಿದೆ.
“ಆನ್ಲೈನ್‌ನಲ್ಲಿ ಮಾಡುವುದು ಬಹಳಷ್ಟಿದೆ – ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್ಲೆಟ್‌ಗಳೊಂದಿಗೆ ಇದರ ಹೆಚ್ಚಿನ ಲಾಭ ಪಡೆದುಕೊಳ್ಳಿ. ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ಗಳು ಹಾಗೂ ಟ್ಯಾಬ್ಲೆಟ್‌ಗಳ ಮೇಲೆ 10% ಕ್ಯಾಶ್‌ಬ್ಯಾಕ್ ಪಡೆಯಿರಿ. ನವೆಂಬರ್ 10, 2021ರವರೆಗೆ ವಾಯಿದೆ ಇರಲಿದೆ. ಹೆಚ್ಚಿನ ಆಫರ್‌ಗಳಿಗೆ: sbicard.com/offers,” ಎಂದು ಎಸ್.ಬಿ.ಐ. ಟ್ವೀಟ್ ಮಾಡಿದೆ.
ಹೊಸ ಶಕ್ತಿಯೊಂದಿಗೆ ಭಾರತದ ಸಾಮರ್ಥ್ಯ ಜಗತ್ತಿಗೆ ತೋರಿಸಿದ ಲಸಿಕೆ ಅಭಿಯಾನ: ‘ಮನ್ ಕಿ ಬಾತ್’ನಲ್ಲಿ ಮೋದಿ
ಈ ಕೊಡುಗೆಯು ಸ್ಯಾಮ್ಸಂಗ್‌ನ ಆಯ್ದ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಮೇಲೆ ಮಾತ್ರವೇ ಇರಲಿದೆ. ಎಸ್.ಬಿ.ಐ.ನ ಕಾರ್ಪೋರೇಟ್ ಕ್ರೆಡಿಟ್ ಕಾರ್ಡ್‌ಗಳು ಹಾಗೂ ಪೇಟಿಎಂ ಸಹಬ್ರಾಂಡ್ ಕಾರ್ಡ್‌ಗಳನ್ನು ಹೊರತುಪಡಿಸಿ ಮಿಕ್ಕ ಕಾರ್ಡ್‌ಗಳು ಈ ಕೊಡುಗೆಗೆ ಅರ್ಹವಾಗಿವೆ. ಈ ಕೊಡುಗೆ ಕುರಿತ ಇನ್ನಷ್ಟು ಮಾಹಿತಿಗಾಗಿ sbicard.comಗೆ ಭೇಟಿ ನೀಡಿ.
https://twitter.com/SBICard_Connect/status/1451136392663240705?ref_src=twsrc%5Etfw%7Ctwcamp%5Etweetembed%7Ctwterm%5E1451136392663240705%7Ctwgr%5E%7Ctwcon%5Es1_&ref_url=https%3A%2F%2Fwww.zeebiz.com%2Fpersonal-finance%2Fnews-avail-these-benefits-on-purchase-of-samsung-mobiles-tablets-with-sbi-credit-card-check-details-here-168639