
ರಿವರ್ಸ್ ಆಟೋ ರಿಕ್ಷಾ ಚಾಲನೆ ಸ್ಪರ್ಧೆಯನ್ನು ಆಯೋಜಿಸಿ ನೋಡುಗರಿಗೆ ಬಹಳ ಮನರಂಜನೆ ನೀಡಿತ್ತು. ಸಂಗಮೇಶ್ವರ ಯಾತ್ರೆಯ ನಿಮಿತ್ತ ಹರಿಪುರ ಗ್ರಾಮದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸ್ಪರ್ಧೆಯಲ್ಲಿ ಸಾಮಾನ್ಯವಾದ ರೀತಿಯಲ್ಲೇ ಆಟೋ ಓಡಿಸುವುದು ಸಾಹಸದ ಕೆಲಸ. ಅಂಥದರಲ್ಲಿ ರಿವರ್ಸ್ ಆಗಿ ಆಟೋ ಓಡಿಸುವುದು ಭಾರೀ ಕುತೂಹಲ ಹುಟ್ಟಿಸಿತ್ತು. ಸ್ಪರ್ಧಾಳುಗಳು ಜಿದ್ದಿಗೆ ಬಿದ್ದವರಂತೆ ರಿವರ್ಸ್ ಆಟೋ ಓಡಿ ನೋಡಿಗರಿಗೆ ಸಖತ್ ಮನರಂಜನೆ ಕೊಟ್ಟರು.
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಅಚ್ಚರಿ ಮತ್ತು ಮೆಚ್ಚುಗೆ ಗಳಿಸಿದ್ದು ಆಟೋ ರಿಕ್ಷಾದಲ್ಲಿ ರಿವರ್ಸ್ ಗೇರ್ ಇದೆಯೇ? ಎಂದು ಪ್ರಶ್ನಿಸಿದ್ದಾರೆ.