ಸಮಾಜದಲ್ಲಿ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಸಾಧನೆ ಮಾಡಬೇಕೆಂದು ಬಯಸುತ್ತಾರೆ. ಮಕ್ಕಳು ಏನಾದರೂ ಮಹತ್ತರವಾದದ್ದನ್ನು ಸಾಧಿಸಿದಾಗ ಅವರ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ.
ಇಲ್ಲೊಂದು ಪ್ರಕರಣದಲ್ಲಿ ಆಟೋರಿಕ್ಷಾ ಚಾಲಕನ ಮಗನ ಅಂಕಪಟ್ಟಿಯನ್ನು ತೋರಿಸುವ ಫೋಟೋವನ್ನು ವಿಕಾಸ್ ಅರೋರಾ ಎಂಬುವರು ಲಿಂಕ್ಡ್ ಇನ್ ತಾಣದಲ್ಲಿ ಹಂಚಿಕೊಂಡಿದ್ದಾರೆ.
ಮಹಾರಾಷ್ಟ್ರದ ಅಕೋಲಾದಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ, ಆಟೋ ಚಾಲಕ, ತನ್ನ ಮಗನ ಅಂಕಪಟ್ಟಿಯನ್ನು ನಮ್ಮೊಂದಿಗೆ ಸಂತೋಷದಿಂದ ಹಂಚಿಕೊಂಡರು. ಅಂಕಗಳನ್ನು ಒಮ್ಮೆ ನೋಡಿ…… ಮಗನ ಸಾಧನೆ ನೋಡಿ ತಂದೆಯು ತುಂಬಾ ಹೆಮ್ಮೆ ಪಡುತ್ತಿದ್ದರು ಅರೋರಾ ಬರೆದುಕೊಂಡಿದ್ದಾರೆ.
ಆ ಆಟೋರಿಕ್ಷಾ ಚಾಲಕನ ಮಗ ಗರುಡ್ ಸಚಿನ್ ಬಾಲು 12ನೇ ತರಗತಿಯಲ್ಲಿ 600 ಅಂಕಗಳಿಗೆ ಒಟ್ಟು 592 ಅಂಕಗಳನ್ನು ಗಳಿಸಿದ್ದಾನೆ.
ಚಾಲಕನು ತನ್ನ ಪ್ರಯಾಣಿಕರೊಂದಿಗೆ ಒಳ್ಳೆಯ ಸುದ್ದಿಯನ್ನು ಹಂಚಿಕೊಳ್ಳಲು ಬಯಸುತ್ತಾನೆ ಎಂಬ ಅಂಶವು ನೆಟ್ಟಿಗರನ್ನು ಹೃದಯಸ್ಪರ್ಶಿಗೊಳಿಸಿದೆ. 45,500 ಕ್ಕೂ ಹೆಚ್ಚು ಲೈಕ್ಗಳನ್ನು ಹೊಂದಿರುವ ಪೋಸ್ಟ್ಗೆ ಅಭಿನಂದನೆ ಸಲ್ಲಿಕೆ ನೂರಾರು ಕಾಮೆಂಟ್ ಬಂದಿವೆ.
“ಆ ವಿದ್ಯಾರ್ಥಿಗೆ ಅಭಿನಂದನೆಗಳು, ಉನ್ನತ ಶಿಕ್ಷಣಕ್ಕೆ ಬೆಂಬಲ ಬೇಕಿದ್ದರೆ ದಯವಿಟ್ಟು ನನಗೆ ತಿಳಿಸಿ” ಎಂದು ಒಬ್ಬ ಬಳಕೆದಾರರು ಭರವಸೆ ಕೊಟ್ಟಿದ್ದಾರೆ.