ಅಂಧೇರಿಯ ಕೋಕಿಲಾಬೆನ್ ಆಸ್ಪತ್ರೆಯ ಉದ್ಯೋಗಿ 24 ವರ್ಷದ ನರ್ಸ್‌ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆಟೋರಿಕ್ಷಾ ಚಾಲಕನೋರ್ವನನ್ನು ಜುಹು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಮಾಧ್ಯಮ ವರದಿಯ ಪ್ರಕಾರ, ಫೆಬ್ರವರಿ 17 ರಂದು ನರ್ಸ್ ತನ್ನ ರಾತ್ರಿ ಪಾಳಿಯ ಕರ್ತವ್ಯದಿಂದ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ತನ್ನ ರಾತ್ರಿಪಾಳಿಯ ಕೆಲಸ ಮುಗಿಸಿಕೊಂಡು ಮನೆಗೆ ಮರಳಲು ಸಂತ್ರಸ್ತೆ ನರ್ಸ್, ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು. ಆಕೆ ಒಂಟಿ ಇರುವುದನ್ನು ನೋಡಿದ ಆಟೋ ಚಾಲಕ, ಆಕೆಯ ಬಳಿಗೆ ಬಂದು ತನ್ನ ಆಟೋದಲ್ಲಿ ಅಂಧೇರಿ ರೈಲು ನಿಲ್ದಾಣಕ್ಕೆ ಡ್ರಾಪ್ ನೀಡುವುದಾಗಿ ಹೇಳಿದ್ದಾನೆ. ಅಲ್ಲದೇ ಈತ ಸಂತ್ರಸ್ತೆಗೆ ರಿಯಾಯಿತಿ ರೈಡ್ ನೀಡುವುದಾಗಿ ತಿಳಿಸಿದ್ದಾನೆ. ಅದಕ್ಕೆ ಒಪ್ಪಿದ ನರ್ಸ್ ಆಟೋ ಹತ್ತಿದ್ದಾರೆ.
ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್: ತತ್ಕಾಲ್ ಕಾಯ್ದಿರಿಸಲು IRCTC ಯಿಂದ ʼಕನ್‌ಫರ್ಮ್ ಟಿಕೆಟ್ʼ ಆಪ್ ಬಿಡುಗಡೆ
ಆದರೆ, ಆರೋಪಿಯು ನರ್ಸ್ ಅನ್ನು ರೈಲ್ವೇ ನಿಲ್ದಾಣಕ್ಕೆ ಕರೆದೊಯ್ಯುವ ಬದಲು ಜುಹುವಿನ ಗುಲ್ಮೊಹರ್ ರಸ್ತೆಯಲ್ಲಿರುವ ನಿರ್ಜನ ಸ್ಥಳಕ್ಕೆ ಕರೆದೊಯ್ದು ಬಲವಂತವಾಗಿ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಆದರೆ ದೈರ್ಯ ತಂದುಕೊಂಡ ಸಂತ್ರಸ್ತೆ ಜೋರಾಗಿ ಕೂಗಿಕೊಂಡಿದ್ದಾರೆ. ಇದರಿಂದ ಬೆಚ್ಚಿದ ಆರೋಪಿ, ಸಿಕ್ಕಿಬೀಳುವ ಭಯದಿಂದ ಸ್ಥಳದಿಂದ ಪರಾರಿಯಾಗಿದ್ದಾನೆ.
ಅಂತಾ ಸಂದರ್ಭದಲ್ಲು ಸಮಯಪ್ರಜ್ಞೆ ಮೆರೆದ ಸಂತ್ರಸ್ತೆ, ದುಷ್ಕರ್ಮಿಯ ಆಟೋ ನಂಬರ್ ನಮೂದಿಸಿಕೊಂಡಿದ್ದಾರೆ. ನಂತರ ತನಗಾದ ದೌರ್ಜನ್ಯದ ಸಂಬಂಧ ಜುಹು ಪೊಲೀಸರಿಗೆ ಆಟೋ ನಂಬರ್ ಸಮೇತ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಆಟೋ ಚಾಲಕ ದಿನೇಶ್ ಚೌರಾಸಿಯಾ ವಿರುದ್ಧ ದೌರ್ಜನ್ಯದ ಪ್ರಕರಣ ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆಯ ನಂತರ, ಆರೋಪಿಯನ್ನು ಭಾನುವಾರ ಕಾಂಡಿವಲಿಯಲ್ಲಿ ಬಂಧಿಸಲಾಗಿದೆ.