ಈ ಬಿಸಿಲಿನ ತಾಪದಲ್ಲಿ ನಾವೆಲ್ಲರೂ ಕಬ್ಬಿನ ರಸವನ್ನು ಕುಡಿಯಲು ಇಷ್ಟಪಡುತ್ತೇವೆ. ಕಬ್ಬಿನ ಜ್ಯೂಸ್ ಮಾರುವವರಿಗೆ ಕೈಯಿಂದ ಕಬ್ಬನ್ನು ತಿರುಗಿಸಿ ಅರೆಯುವುದು ತ್ರಾಸದಾಯಕವಾಗಿದೆ.
ಆದರೆ ತಂತ್ರಜ್ಞಾನವು ಮುಂದುವರಿದಂತೆ ಜನ ಯಂತ್ರದ ಮೊರೆಹೋಗಿದ್ದಾರೆ. ಇದರಿಂದ ಯಾವುದೇ ಕೆಲಸವನ್ನು ಹೆಚ್ಚು ಶ್ರಮವಿಲ್ಲದೇ ಕಡಿಮೆ ಸಮಯದಲ್ಲಿ ಮಾಡಬಹುದಾಗಿದೆ. ಪರಿಸರ ಸ್ನೇಹಿ ವಿದ್ಯುತ್ ಕಬ್ಬಿನ ರಸ ಯಂತ್ರಗಳು ಇದೀಗ ಆ ಸ್ಥಾನವನ್ನ ಆಕ್ರಮಿಸಿವೆ.
ಇಂತಹ ಹೈಟೆಕ್ ಸ್ವಯಂಚಾಲಿತ ಯಂತ್ರದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ನಿವೃತ್ತ ಏರ್ ಮಾರ್ಷಲ್ (IAF), ಅನಿಲ್ ಚೋಪ್ರಾ ಅವರು ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.
ಇದರಲ್ಲಿ ವ್ಯಕ್ತಿಯ ಹೆಚ್ಚು ಶ್ರಮವಿಲ್ಲದೇ ಯಂತ್ರದ ಸಹಾಯದಿಂದ ಕಬ್ಬಿನ ಜ್ಯೂಸ್ ನೀಡಿದ್ದಾರೆ. ಕೆಲವು ಗುಂಡಿಗಳನ್ನು ಒತ್ತಿ ಕಬ್ಬಿನ ರಸ ನೀಡಿದ್ದಾರೆ. ಕೇವಲ 20 ರೂಪಾಯಿಗೆ ಗ್ರಾಹಕರಿಗೆ ಕಬ್ಬಿನ ಜ್ಯೂಸ್ ನೀಡಿರುವ ಈ ಯಂತ್ರದ ವಿಡಿಯೋ ವೈರಲ್ ಆಗಿದೆ.