ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ದಿಢೀರ್ ಏರಿಕೆ ಮಾಡುವ ಮೂಲಕ ಪ್ರಯಾಣಿಕರಿಗೆ ಶಾಕ್ ನೀಡಲಾಗಿದೆ. ಕನಿಷ್ಠ 25 ರೂಪಾಯಿ ಇದ್ದ ಆಟೋ ಪ್ರಯಾಣ ದರ 35 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.
ನಂತರ ಪ್ರತಿ ಕಿಲೋಮೀಟರ್ ಗೆ 15 ರೂಪಾಯಿ ಏರಿಕೆ ಮಾಡಲಾಗಿದೆ. ಈ ಹಿಂದೆ ಪ್ರತಿ ಕಿಲೋಮೀಟರ್ ಗೆ 13 ರೂಪಾಯಿ ಇದ್ದ ದರ 15 ರೂಪಾಯಿಗೆ ಏರಿಸಲಾಗಿದೆ. 20 ಕೆಜಿ ಮೇಲ್ಪಟ್ಟ ಲಗೇಜ್ ಗೆ 5 ರೂಪಾಯಿ ಮಾಡಲಾಗಿದ್ದು, 50 ಕೆಜಿವರೆಗೆ ಮಾತ್ರ ಲಗೇಜ್ ಸಾಗಿಸಲು ಅವಕಾಶ ಕಲ್ಪಿಸಲಾಗಿದೆ.
ʼಆರ್ಥಿಕʼ ಸ್ವಾವಲಂಬಿಯಾಗುವ ಮಹಿಳೆಯರಿಗೆ ಇದು ಒಳ್ಳೆ ಆಯ್ಕೆ
ಡಿಸೆಂಬರ್ 1ರಿಂದ ನೂತನ ದರ ಜಾರಿಗೆ ಬರಲಿದೆ.