
ಮನುಷ್ಯನಿಗೆ ವಿಚಾರ, ಬುದ್ಧಿವಂತಿಕೆ ಜೊತೆಗೆ ಸಮಯಕ್ಕೆ ತಕ್ಕಂತೆ ಸ್ವಲ್ಪ ತಾಳ್ಮೆ ಎಷ್ಟು ಮುಖ್ಯ ಎಂಬುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಉತ್ತಮ ನಿದರ್ಶನವಾಗಿದೆ.
ಇಕ್ಕಟ್ಟಾದ ರಸ್ತೆಯಲ್ಲಿ ಆಟೋ ಓಡಿಸಿಕೊಂಡು ಬಂದ ಚಾಲಕನಿಗೆ ಮನೆಯ ಮುಂದೆ ರಸ್ತೆಯಲ್ಲಿ ನಿಲ್ಲಿಸಿದ್ದ ಸೈಕೊಲ್ಲೊಂದು ಅಡ್ಡಿಯಾಗಿದೆ. ಆಟೋಗೆ ಅಡ್ದಿಯಾದ ಸೈಕಲ್ ನ್ನು ಚಾಲಕ ಆಟೋದಲ್ಲಿ ಕುಳಿತಲ್ಲಿಂದಲೇ ಕೈಯಲ್ಲಿ ಸೈಡಿಗೆ ಸರಿಸುವ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿದ್ದಾನೆ.
ಸೈಕಲ್ ಕೆಳಗೆ ಬಿದ್ದಿದೆ…. ಹೀಗೆ ಬಿದ್ದ ಸೈಕಲ್ ಆಟೋ ಹಿಂಬದಿ ಚಕ್ರಕ್ಕೆ ಸಿಲುಕಿ, ಆಟೋ ಮುಂದೆ ಸಾಗಲು ಮತ್ತೆ ಅಡ್ಡಿಯಾಗಿದೆ. ತಾಳ್ಮೆ ಕಳೆದುಕೊಂಡು ಆಟೋದಿಂದ ಇಳಿದುಬಂದ ಚಾಲಕ ಸೈಕಲ್ ನ್ನು ಎತ್ತಿ ಪಕ್ಕಕ್ಕೆ ಇಟ್ಟಿದ್ದಾನೆ…. ಸೈಕಲ್ ಎತ್ತಿ ಇಡುತ್ತಿದಂತೆ ಚಾಲಕನಿಲ್ಲದೇ ಆಟೋ ಮುಂದೆ ಸಾಗಿದ್ದು, ಚಾಲಕ ಹಿಂದೆ ನೋಡುವಷ್ಟರಲ್ಲಿ ಆಟೋ ನಿಯಂತ್ರಣ ಕಳೆದುಕೊಂಡು ಚಲಿಸಿದೆ. ಗಾಬರಿಯಾಗಿ ಚಾಲಕ ಆಟೊ ಹಿಂದೆ ಓಡಿದ್ದಾನೆ. ಆಟೋ ಮುಂದಿನ ರಸ್ತೆಯನ್ನೂ ದಾಟಿ ಕೆಳಗೆ ಬಿದ್ದಿದೆ.
ಆಟೋ ಚಾಲಕ ಇಕ್ಕಟ್ಟಾದ ರಸ್ತೆಯಲ್ಲಿ ಅತಿಬುದ್ಧಿವಂತಿಕೆ ತೋರುವ ಬದಲು ಮೊದಲೇ ಕೊಂಚ ತಾಳ್ಮೆಯಿಂದ ಸೈಕಲ್ ಪಕ್ಕಕ್ಕೆ ನಿಲ್ಲಿಸಿ ಆಟೋ ಚಲಾಯಿಸಿಕೊಂಡು ಹೋಗಿದ್ದರೆ ಆಗುವ ಅವಘಡ ತಪ್ಪುತ್ತಿತ್ತು, ಆಟೋ ಕೂಡ ಉಳಿಯುತ್ತಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಚಿಕ್ಕ ವಿಡಿಯೋ ಜೀವನದಲ್ಲಿ ತಾಳ್ಮೆಯ ದೊಡ್ಡ ಪಾಠ ಕಲಿಸುವಂತಿದೆ.