
ಬೆಂಗಳೂರು: ದುಬಾರಿ ದುನಿಯಾದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜನಸಾಮಾನ್ಯರು ಬದುಕು ದಿನದಿಂದ ದಿನಕ್ಕೆ ದುಸ್ಥರವಾಗುತ್ತಿದೆ. ಬೆಲೆ ಏರಿಕೆಯ ಬಿಸಿ ಜನರ ಜೀವನದ ಮೇಲೆ ಬರೆ ಎಳೆದಂತಾಗಿದೆ. ಕೆಲ ದಿನಗಳ ಹಿಂದೆ ಬಿಎಂಟಿಸಿ ಬಸ್ ಪ್ರಯಾಣ ದರ, ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯಾಗಿತ್ತು. ಇದೀಗ ಆಟೋ ಪ್ರಯಾಣ ದರ ಕೂಡ ಹೆಚ್ಚಳವಾಗುವುದು ಫಿಕ್ಸ್ ಆಗಿದೆ.
ಆಟೋ ಪ್ರಯಾಣ ದರ ಹೆಚ್ಚಳ ಮಾಡುವಂತೆ ಆಟೋ ಚಾಲಕರು ಪಟ್ಟು ಹಿಡಿದಿದ್ದಾರೆ. ಕಿ.ಮೀಗೆ 5 ರೂಪಾಯಿ, 2 ಕಿ.ಮೀ ಗೆ 10 ರೂಪಾಯಿಯಂತೆ ದರ ಏರಿಕೆ ಮಾಡುವಂತೆ ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಇದೇ ತಿಂಗಳಲ್ಲಿ ಆಟೋ ಮೀಟರ್ ದರ ಹೆಚ್ಚಳವಾಗಿವ ಸಾಧ್ಯತೆ ಇದೆ.
ಆಟೋ ಪ್ರಯಾಣ ದರ ಪರೀಷ್ಕರಣೆಗೆ ಮಾರ್ಚ್ 12ರಂದು ಬೆಳಿಗ್ಗೆ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಸಭೆ ಕರೆಯಲಾಗಿದ್ದು, ಸಭೆ ಬಳಿಕ ದರ ಏರಿಕೆ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಒಟ್ಟಾರೆ ಆಟೋ ಪ್ರಯಾಣ ದರವೂ ಶೀಘ್ರದಲ್ಲಿ ಹೆಚ್ಚಳವಾಗುವ ಸಾದ್ಯತೆ ದಟ್ಟವಾಗಿದೆ.