alex Certify ಪೆಟ್ರೋಲ್‌ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್: ಡಬಲ್ ಸವಾರಿಯ ಮೊದಲ‌ ಇವಿ ಬೈಸಿಕಲ್ ಮಾರುಕಟ್ಟೆಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೆಟ್ರೋಲ್‌ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್: ಡಬಲ್ ಸವಾರಿಯ ಮೊದಲ‌ ಇವಿ ಬೈಸಿಕಲ್ ಮಾರುಕಟ್ಟೆಗೆ

ದೇಶದಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆ ಹೆಚ್ಚುತ್ತಿದೆ. ಈ ಪರಿಸ್ಥಿತಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ರೇಜ್ ಹೆಚ್ಚುತ್ತಿದೆ. ವೋಲ್ಟ್ರಾನ್ ಮೋಟಾರ್ಸ್ ಈಗ ತನ್ನ ವಿದ್ಯುತ್ ಚಕ್ರದ VM 50 ಮತ್ತು VM 100 ಎಲೆಕ್ಟ್ರಿಕಲ್ ಸೈಕಲ್ ಬಿಡುಗಡೆ ಮಾಡಿದೆ. ಒಂದು ಚಾರ್ಜ್ ನಲ್ಲಿ ಇದು  75 ಕಿಲೋಮೀಟರ್ ನಿಂದ 100 ಕಿಲೋಮೀಟರ್ ವರೆಗೆ ಚಲಿಸಲಿದೆ.

ವಿದ್ಯುತ್ ಬೈಸಿಕಲ್ ವಿಭಾಗವು ನಿರಂತರವಾಗಿ ಬೆಳೆಯುತ್ತಿದೆ. ಈವರೆಗೆ ಮಾರುಕಟ್ಟೆಯಲ್ಲಿರುವ ಎಲ್ಲಾ ಎಲೆಕ್ಟ್ರಿಕ್ ಬೈಸಿಕಲ್‌ಗಳು ಒಂದೇ ಸೀಟ್ ಹೊಂದಿದ್ದವು. ಆದರೆ ಈಗ ದೇಶದ ಮೊದಲ ಡಬಲ್ ರೈಡ್ ಸೈಕಲ್ ಬಂದಿದೆ. ವೋಲ್ಟ್ರಾನ್ ಮೋಟಾರ್ಸ್ ಸಿಇಒ ಪ್ರಶಾಂತ್ ಕುಮಾರ್ ತಮ್ಮ ಎಲೆಕ್ಟ್ರಿಕ್ ಸೈಕಲ್ ದೇಶದ ಮೊದಲ ಡಬಲ್ ರೈಡ್ ಎಲೆಕ್ಟ್ರಿಕ್ ಸೈಕಲ್ ಎಂದಿದ್ದಾರೆ. ಇದರ ಗರಿಷ್ಠ ವೇಗ ಗಂಟೆಗೆ 25 ಕಿಮೀ ಆಗಿರುತ್ತದೆ.

ವೋಲ್ಟ್ರಾನ್ ಮೋಟಾರ್ಸ್ ನಿಂದ VM 50 ಕೇವಲ 35,000 ರೂಪಾಯಿಗೆ ಲಭ್ಯವಿದೆ. ವಿಎಂ 100, ಅತ್ಯಾಧುನಿಕ ಮಾದರಿಯಾಗಿದ್ದು, ಇದರ ಬೆಲೆ 39,250 ರೂಪಾಯಿಯಾಗಿದೆ. ಇದು ವಿದ್ಯುತ್ ಚಕ್ರವನ್ನು ಹೊಂದಿದ್ದು, ಕಂಪನಿಯು ಕಪ್ಪು, ಹಳದಿ, ನೀಲಿ ಮತ್ತು ಕೆಂಪು ಬಣ್ಣಗಳಲ್ಲಿ ಬಿಡುಗಡೆ ಮಾಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...