ಚಿಪ್ ಕೊರತೆಯ ಕಾರಣದಿಂದಾಗಿ ತಮ್ಮ ಕುಶಾಕ್ ಮತ್ತು ಟೈಗುನ್ ಕಾರುಗಳಿಂದ ಸ್ವಯಂ-ಚಾಲಿತ ಕನ್ನಡಿಗಳನ್ನು ತೆಗೆದುಹಾಕಲು ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಗಳು ಮುಂದಾಗಿವೆ.
ಹೀಗಾಗಿ, ನೀವು ಉತ್ಕೃಷ್ಟವಾದ ಮಾಡೆಲ್ ಆಯ್ದುಕೊಂಡರೂ ಸಹ ಹೊರಗಡೆಯ ನೋಟದ ಹಿಂಬದಿ ಕನ್ನಡಿಗಳನ್ನು ನೀವು ಮ್ಯಾನುವಲ್ ಆಗಿಯೇ ಹಿಂದಕ್ಕೆ ಎಳೆದುಕೊಳ್ಳಬೇಕು. ಜಾಗತಿಕ ಮಟ್ಟದಲ್ಲಿ ಸೆಮಿ ಕಂಡಕ್ಟರ್‌ಗಳ ಕೊರತೆಯಿಂದಾಗಿ ಹೀಗೆ ಆಗುತ್ತಿದೆ ಎಂದು ಸ್ಕೋಡಾ ಆಟೋ ಇಂಡಿಯಾದ ನಿದೇರ್ಶಕ ಜ಼ಾಕ್ ಹಾಲ್ಲಿಸ್ ಸ್ಪಷ್ಟಪಡಿಸಿದ್ದಾರೆ.
ಟ್ರಸ್ಟ್ ಅಧ್ಯಕ್ಷರ ಆಯ್ಕೆ ವಿವಾದ: ಆರ್.ಎಲ್. ಜಾಲಪ್ಪ ಕುಟುಂಬದವರಿಂದ ಹೊಸ ಕಮಿಟಿ
ಟ್ವಿಟರ್ ಬಳಕೆದಾರರೊಬ್ಬರು ಆಟೋ-ಫೋಲ್ಡಿಂಗ್ ಕನ್ನಡಿಗಳನ್ನು ತೆಗೆದುಹಾಕಿದ ವಿಚಾರದ ಬಗ್ಗೆ ಕೇಳಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ಜ಼ಾಕ್, ಪೂರೈಕೆ ಸಮಸ್ಯೆಯನ್ನು ಶೀಘ್ರ ಪರಿಹರಿಸಲಾಗುವುದು ಎಂದಿದ್ದಾರೆ. ಆದ್ದರಿಂದ ಈ ಫೀಚರ್ ಅನ್ನು ಸ್ಕೋಡಾ ಶೀಘ್ರವೇ ಮರುಪರಿಚಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಈ ಮಾಹಿತಿಯನ್ನು ಇನ್ನೂ ಸ್ಪಷ್ಟಪಡಿಸಬೇಕಿದೆ.