ದೆಹಲಿಯಲ್ಲಿ ನಡೆಯುತ್ತಿರುವ ಆಟೋ ಎಕ್ಸ್‌ಪೋ 2023ನಲ್ಲಿ ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ (GEM), ಗ್ರೀವ್ಸ್ ಕಾಟನ್‌ನ EV ಆರ್ಮ್, ಮೂರು ಇ-ಸ್ಕೂಟರ್‌ಗಳನ್ನು ಪ್ರದರ್ಶಿಸಿದೆ.
ಆಂಪಿಯರ್ ನ್ಯೂ ಪ್ರೈಮಸ್ ಎಲೆಕ್ಟ್ರಿಕ್ ಸ್ಕೂಟರ್ ಕೂಡ ಪ್ರದರ್ಶನಗೊಳ್ಳುತ್ತಿದೆ. ಈ ಎಲೆಕ್ಟ್ರಿಕ್ ವಾಹನ ಚಾರ್ಜ್‌ನಲ್ಲಿ 120 ಕಿ.ಮೀ ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದರ ಜೊತೆಗೆ ಕಂಪನಿಯು ಹೊಸ NXG ಮತ್ತು NXU ಇ-ಸ್ಕೂಟರ್ ಪರಿಕಲ್ಪನೆಯನ್ನು ಹೊರತಂದಿದೆ. ಇವೆರಡು ಸ್ಕೂಟರ್‌ಗಳನ್ನು ಈ ವರ್ಷ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಇವು ಲಾಂಚ್ ಆದ ಮೇಲೆ ಒಂದೇ ಚಾರ್ಜ್‌ನಲ್ಲಿ 120 ಕಿಮೀ ರೇಂಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ನ್ಯೂ ಪ್ರೈಮಸ್, ಹೊಸ 3kWh ಲಿಥಿಯಂ-ಐರನ್-ಫಾಸ್ಫೇಟ್ ಬ್ಯಾಟರಿಯನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 120 ಕಿಮೀ ವ್ಯಾಪ್ತಿಯನ್ನು ಹೊಂದಿದೆ. ಅಸ್ತಿತ್ವದಲ್ಲಿರುವ ಮ್ಯಾಗ್ನಸ್ ಅನ್ನು ಹೋಲುವಂತೆ ತೋರುತ್ತಿದೆ, 75kph ನಷ್ಟು ಉನ್ನತ ವೇಗವನ್ನು ಹೊಂದಿದೆ. ಸಾಮಾನ್ಯ 5A ಸಾಕೆಟ್‌ಗೆ ಪ್ಲಗ್ ಮಾಡಿದಾಗ ಪೂರ್ಣ ಚಾರ್ಜ್ 4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಇದು ವೇಗವಾಗಿ ಚಾರ್ಜ್ ಆಗುವ 30A ಸಾಕೆಟ್‌ಗೆ ಪ್ಲಗ್ ಮಾಡಿದಾಗ ಎರಡು ಗಂಟೆಗಳಿಗೆ ಇಳಿಯುತ್ತದೆ ಎಂದು ಕಂಪೆನಿ ಹೇಳಿದೆ.
ಆಂಪಿಯರ್ ಪ್ರೈಮಸ್, ಗ್ರಾಹಕರಿಗೆ ಖರೀದಿಗೆ ಲಭ್ಯವಿರುವ ಮ್ಯಾಗ್ನಸ್ ಎಲೆಕ್ಟ್ರಿಕ್ ಸ್ಕೂಟರ್‌ನಂತೆಯೇ ವಿನ್ಯಾಸವನ್ನು ಹೊಂದಿದೆ. 4 ಹೊಸ ಡ್ಯುಯಲ್-ಟೋನ್ ಬಣ್ಣಗಳನ್ನು ಪಡೆದಿದೆ. ಅಲ್ಲದೆ, ಪ್ರೈಮಸ್ ಇ-ಸ್ಕೂಟರ್ ಒಬೆನ್ ರೋರ್ ಇ-ಬೈಕ್‌ನಂತೆಯೇ ಹೊಸ 3kWh ಲಿಥಿಯಂ-ಐರನ್-ಫಾಸ್ಫೇಟ್ ಬ್ಯಾಟರಿಯನ್ನು ಹೊಂದಿದೆ.
ಇದು 120 km ರೇಂಜ್ ನೀಡಲಿದ್ದು, 75kph ಗರಿಷ್ಠ ವೇಗವನ್ನು ಹೊಂದಿದೆ. ಸಾಮಾನ್ಯ 5A ಸಾಕೆಟ್ ಬಳಕೆಯೊಂದಿಗೆ ಸಂಪೂರ್ಣ ಚಾರ್ಜ್ ಆಗಲು 4 ಗಂಟೆ ತೆಗೆದುಕೊಳ್ಳುತ್ತದೆ. ಇದು ವೇಗವಾಗಿ ಚಾರ್ಜ್ ಆಗುವ 30A ಸಾಕೆಟ್ ಬಳಕೆಯೊಂದಿಗೆ 2 ಗಂಟೆಗಳಲ್ಲಿ ಚಾರ್ಜ್ ಆಗುತ್ತದೆ.