
ಪುತ್ತೂರು: ವಿಟ್ಲದ ಉರಿಮಜಲು ಜಂಕ್ಷನ್ ಆಟೋ ಚಾಲಕನಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಉರಿಮಜಲು ಜಂಕ್ಷನ್ ಇಡ್ಕಿದು ಪಂಚಾಯತ್ ಬಳಿ ಸಾರ್ವಜನಿಕರ ಎದುರಲ್ಲೇ ಆಟೋ ಚಾಲಕ ಶರೀಫ್ ಎಂಬಾತನಿಗೆ ಕಾರ್ಯಾಡಿ ನಿವಾಸಿ ಆಫೀ ಎಂಬಾತ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡ ಶರೀಫ್ ನನ್ನು ಸ್ಥಳೀಯರು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಭಾಗದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದ್ದು, ಘಟನೆಗೆ ಕಾರಣವೆನ್ನಲಾಗಿದೆ.