ಬೆಂಗಳೂರು: ಲಾಕ್ ಡೌನ್ ಜಾರಿ ಮಾಡಿದ ಹಿನ್ನಲೆಯಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಘೋಷಣೆ ಮಾಡಲಾದ 3,000 ರೂ. ಪ್ಯಾಕೇಜ್ ಹಣವನ್ನು ಚಾಲಕರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.
ಸೇವಾಸಿಂಧು ಪೋರ್ಟಲ್ ನಲ್ಲಿ ಇಂದಿನಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ. ಒಂದು ವಾಹನಕ್ಕೆ ಒಬ್ಬ ಚಾಲಕನಿಗೆ ಪರಿಹಾರ ನೀಡಲಾಗುವುದು. ಒಬ್ಬ ವ್ಯಕ್ತಿಯ ಬಳಿ ಹಲವು ವಾಹನಗಳು ಇದ್ದಲ್ಲಿ ಒಂದು ವಾಹನಕ್ಕೆ ಮಾತ್ರ ನೆರವು ಸಿಗಲಿದೆ. ಮಾಲೀಕ ಸಮ್ಮತಿಸಿದರೆ ಆತನ ವಾಹನಗಳ ಪರಿಹಾರವನ್ನು ಚಾಲಕರಿಗೆ ನೀಡಲಾಗುತ್ತದೆ. ರಾಜ್ಯದಲ್ಲಿ ಚಾಲನಾ ಪರವಾನಿಗೆ ಹೊಂದಿರುವ ಹಾಗೂ ನೋಂದಣಿ ಮಾಡಿದ 2.10 ಲಕ್ಷ ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ತಲಾ 3,000 ರೂ. ನೀಡಲಾಗುವುದು. ಮೇ 27 ರಂದು ಬೆಳಗ್ಗೆ 11 ಗಂಟೆಯಿಂದ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದು.