alex Certify 1784 ರ ಕಬಾಬ್​ ರೆಸಿಪಿ ವೈರಲ್​: ಬಂಗಾಳದ ಮೊದಲ ಗವರ್ನರ್ ಜನರಲ್ ಡೈರಿಯಲ್ಲಿ ಸಿಕ್ಕ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1784 ರ ಕಬಾಬ್​ ರೆಸಿಪಿ ವೈರಲ್​: ಬಂಗಾಳದ ಮೊದಲ ಗವರ್ನರ್ ಜನರಲ್ ಡೈರಿಯಲ್ಲಿ ಸಿಕ್ಕ ಮಾಹಿತಿ

1784 ರ ಕಬಾಬ್​ ಪಾಕ ವಿಧಾನದ ಮಾಹಿತಿಯೊಂದು ಇದೀಗ ವೈರಲ್​ ಆಗಿದೆ. ಬಂಗಾಳದ ಮೊದಲ ಗವರ್ನರ್ ಜನರಲ್ ವಾರೆನ್ ಹೇಸ್ಟಿಂಗ್ಸ್ ಅವರ ಖಾಸಗಿ ಡೈರಿಯಿಂದ ಇದನ್ನು ಶೇರ್​ ಮಾಡಲಾಗಿದೆ. ಬರಹಗಾರರಾದ ಇರಾ ಮುಖೋಟಿ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋದಲ್ಲಿ ಮಾಂಸ, ಬೆಳ್ಳುಳ್ಳಿ, ಮೆಣಸಿನಕಾಯಿ, ಮೊಟ್ಟೆಯ ಹಳದಿ, ಮುಂತಾದ ಪದಾರ್ಥಗಳನ್ನು ಬರೆದಿರುವುದನ್ನು ಕಾಣಬಹುದು. ಈ ಪದಾರ್ಥಗಳನ್ನು 5 ಅಥವಾ 6 ಗ್ಲಾಸ್ ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ, ನಂತರ ಇದನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಇದನ್ನು ಕಲ್ಲಿನ ಮೇಲೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇದಾದ ನಂತರ ಬೆಣ್ಣೆಯಲ್ಲಿ ಫ್ರೈ ಮಾಡಿ, ಅವು ಬಾಣಲೆಗೆ ಅಂಟಿಕೊಳ್ಳದಂತೆ ನೋಡಿಕೊಳ್ಳಿ ಎಂದು ಬರೆಯಲಾಗಿದೆ.

ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡ ನಂತರ, ಟ್ವೀಟ್ 1.6 ಸಾವಿರ ವೀಕ್ಷಣೆಗಳನ್ನು ಮತ್ತು 1287 ಲೈಕ್ಸ್​​ ಸ್ವೀಕರಿಸಿದೆ. ಕಬಾಬ್ ರೆಸಿಪಿಯ ಈ ಹಳೆಯ ಟಿಪ್ಪಣಿಯಿಂದ ಇಂಟರ್ನೆಟ್ ಬಳಕೆದಾರರು ಸಾಕಷ್ಟು ಕಮೆಂಟ್​ ಹಾಕುತ್ತಿದ್ದಾರೆ. ವಿಶ್ವದ ಕೆಲವು ರುಚಿಕರವಾದ ಕಬಾಬ್‌ಗಳು ಲಖನೌದಲ್ಲಿ ಇನ್ನೂ ಕಂಡುಬರುತ್ತವೆ ಎಂದು ಮತ್ತೊಬ್ಬರು ಬಳಕೆದಾರರು ಬರೆದುಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...