ಸಾಮಾನ್ಯವಾಗಿ ಇಂದು ಒಂದು ದಿನದ ಊಟ, ತಿಂಡಿ ಮೆನು ಎರಡನೇ ದಿನಕ್ಕೆ ಇಷ್ಟವಾಗುವುದಿಲ್ಲ, ಕೆಲವು ಮನೆಗಳಲ್ಲಿ ಮಧ್ಯಾಹ್ನಕ್ಕೆ ಮಾಡಿದ ಅಡುಗೆ ರಾತ್ರಿಗೆ ಆಗಿಬರುವುದಿಲ್ಲ. ವೆುನು ನಿರ್ಧಾರದ ಬಗ್ಗೆ ದೊಡ್ಡ ಚರ್ಚೆಯೇ ಆಗುತ್ತದೆ. ಆದರೆ, ಇಲ್ಲೊಬ್ಬಾಕೆ ಎಂಟು ತಿಂಗಳಿಗಾಗುವಷ್ಟು ಅಡುಗೆ ಒಂದೇ ಬಾರಿಗೆ ತಯಾರಿಸಿ ಸಂಗ್ರಹಿಸಿದ್ದಾರೆ.
ಮೂವತ್ತು ವರ್ಷದ ಕೆಲ್ಸಿ ಶಾ ಮೂರು ಮಕ್ಕಳ ತಾಯಿ. ತನ್ನ ಪ್ಯಾಂಟ್ರಿಯಲ್ಲಿ ತಾಜಾ ಉತ್ಪನ್ನಗಳೊಂದಿಗೆ 426 ಸಂಖ್ಯೆಯಲ್ಲಿ ಊಟ ತಯಾರಿಸಿ ದಾಸ್ತಾನು ಮಾಡಿದ್ದಾಳೆ.
ಆಕೆ ಸೆಪ್ಟೆಂಬರ್ 2017 ರಲ್ಲಿ ತಮ್ಮ ಕುಟುಂಬದೊಂದಿಗೆ ಯುಎಸ್ನ ಇಂಡಿಯಾನಾದ ಕ್ರೌನ್ ಪಾಯಿಂಟ್ಗೆ ತೆರಳಿದಾಗ ಊಟ ಸಂರಕ್ಷಿಸಲು ಪ್ರಾರಂಭಿಸಿದಳು.
ಕೆಲ್ಸಿ ತನ್ನ ಮನೆಯಲ್ಲಿ ಅಡುಗೆ ಸಂಗ್ರಹಿಸಲು ಡೀ ಹೈಡ್ರೇಷನ್ ಮತ್ತು ನೀರಿನ ಕ್ಯಾನಿಂಗ್ನಂತಹ ಸಂರಕ್ಷಣೆ ತಂತ್ರಗಳವರೆಗೆ ಎಲ್ಲವನ್ನೂ ಸ್ವತಃ ಕಲಿತಳು. ತನ್ನ ಕುಟುಂಬಕ್ಕೆ ಮುಂದಿನ 8 ತಿಂಗಳ ಊಟ ಸಂರಕ್ಷಿಸಲು ಮೂರು ತಿಂಗಳು ತೆಗೆದುಕೊಂಡಳು.
ಈ ಕುಟುಂಬವು “ನಿಧಾನ ಜೀವನ ಶೈಲಿಯಲ್ಲಿ ಬದುಕಲು ಬಯಸುತ್ತದೆ ಮತ್ತು ಅವರು ಏನು ತಿನ್ನುತ್ತಿದ್ದಾರೋ ಅದರ ಕಚ್ಚಾ ವಸ್ತುಗಳ ಮೂಲವನ್ನು ತಿಳಿದುಕೊಳ್ಳಲು ಬಯಸುತ್ತಾರೆ ಎಂದು ಆಕೆ ಹೇಳಿಕೊಂಡಿದ್ದಾರೆ. ಈ ಪ್ರಯತ್ನದ ಉದ್ದೇಶ, ಸಾಧಕ ಬಾಧಕದ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.