ಕೋತಿ ದಾಳಿಯಿಂದ ತನ್ನ ಮಗುವನ್ನ ತಂದೆಯೊಬ್ಬ ರಕ್ಷಿಸಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದು ಈ ಭಯಾನಕ ಸಾಹಸ ವಿಡಿಯೋ ಅಂತರ್ಜಾಲದಲ್ಲಿ ಗಮನ ಸೆಳೆದಿದೆ.
ಇದರೊಂದಿಗೆ ಥಾಯ್ಲೆಂಡ್‌ನ ಕಡಲತೀರದಲ್ಲಿ ತನ್ನ ಪಾಸ್‌ಪೋರ್ಟ್ ಇದ್ದ ಬ್ಯಾಗ್ ಪಡೆಯಲು ಕೋತಿಯೊಂದಿಗೆ ಹೆಣಗಾಡುತ್ತಿರುವ ವೀಡಿಯೊ ಅಂತರ್ಜಾಲದಲ್ಲಿ ಜನಪ್ರಿಯವಾಗಿದೆ. ಆಸ್ಟ್ರೇಲಿಯನ್ ವ್ಲಾಗಿಂಗ್ ದಂಪತಿಗಳಾದ ರಿಲೆ ವೈಟ್‌ಲಮ್ ಮತ್ತು ಎಲೈನಾ ಕರೌಸು ನಡೆಸುತ್ತಿರುವ ಯೂಟ್ಯೂಬ್ ಚಾನೆಲ್ ‘ಸೈಲಿಂಗ್ ಲಾ ವಾಗಬೊಂಡೆ’ ಈ ವೀಡಿಯೊವನ್ನು ಅಪ್‌ಲೋಡ್ ಮಾಡಿದೆ.
ವೈರಲ್ ಆದ ವಿಡಿಯೋ ಎರಡು ದಿನಗಳಲ್ಲಿ ಏಳು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ದಾಟಿದೆ. ಅದರ ದೃಶ್ಯಗಳು ವೀಕ್ಷಕರನ್ನು ಭಯಭೀತಗೊಳಿಸಿದೆ.