ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರು ತಮ್ಮ ಸಂಗಾತಿ ಜೋಡಿ ಹೇಡನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಅಲ್ಬನೀಸ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹೇಡನ್ ಅವರ ಜೊತೆ ಹೊಳೆಯುವ ಹೊಸ ವಜ್ರದ ಉಂಗುರವನ್ನು ತೋರಿಸುವ ಮೂಲಕ ಸಂತೋಷದ ಸೆಲ್ಫಿಯನ್ನು ಅಲ್ಬನೀಸ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಸುದ್ದಿಗೆ ರಾಷ್ಟ್ರದಾದ್ಯಂತ ಶುಭ ಹಾರೈಕೆಗಳು ಬಂದಿವೆ. ಅಧಿಕಾರದಲ್ಲಿದ್ದಾಗ ವಿವಾಹವಾದ ಮೊದಲ ಹಾಲಿ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಈ ಜೋಡಿ ಸಜ್ಜಾಗಿದೆ.
ಹೃತ್ಪೂರ್ವಕ ಜಂಟಿ ಹೇಳಿಕೆಯಲ್ಲಿ, ಅಲ್ಬನೀಸ್ ಮತ್ತು ಹೇಡನ್ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಈ ಸುದ್ದಿಯನ್ನು ಹಂಚಿಕೊಳ್ಳಲು ನಾವು ರೋಮಾಂಚನಗೊಂಡಿದ್ದೇವೆ, ನಮ್ಮ ಉಳಿದ ಜೀವನವನ್ನು ಒಟ್ಟಿಗೆ ಕಳೆಯಲು ಎದುರು ನೋಡುತ್ತಿದ್ದೇವೆ. ಒಬ್ಬರಿಗೊಬ್ಬರು ಸಿಕ್ಕಿರುವುದು ನಮ್ಮ ನಮ್ಮ ಅದೃಷ್ಟ ಎಂದು ಹೇಳಿದ್ದಾರೆ.