ಸಿಎಂ ಯೋಗಿಗೆ ಶಹಬ್ಬಾಸ್‌ಗಿರಿ ನೀಡಿದ ಆಸ್ಟ್ರೇಲಿಯಾ ಸಂಸದ…! 16-09-2021 7:07PM IST / No Comments / Posted In: India, Featured News, Live News ದೇಶದಲ್ಲಿ ಅತಿದೊಡ್ಡ ರಾಜ್ಯಗಳ ಪೈಕಿ ಒಂದಾಗಿರುವ ಉತ್ತರ ಪ್ರದೇಶದಲ್ಲಿ ಸರಕಾರ ನಡೆಸುವುದು ಸುಲಭದ ಮಾತಲ್ಲ. ಅದರಲ್ಲೂ ಕೊರೊನಾ ಸಾಂಕ್ರಾಮಿಕ ಹತ್ತಿಕ್ಕಲು ಉ.ಪ್ರ.ದಲ್ಲಿ ಆಡಳಿತ ಯಂತ್ರವು 24 ಗಂಟೆ ಕೆಲಸ ಮಾಡಿದರೂ ಸಾಲದು. ಇಂಥ ಸವಾಲಿನ ಕೆಲಸವನ್ನು ಚಾಕಚಕ್ಯತೆಯಿಂದ ನೆರವೇರಿಸಿರುವ ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಆಸ್ಪ್ರೇಲಿಯಾ ಸಂಸದ ಜೇಸನ್ ವುಡ್ ಮೆಚ್ಚುಗೆ ಸೂಚಿಸಿದ್ದಾರೆ. ರಾಜ್ಯದ ಕೊರೊನಾ ನಿರ್ವಹಣೆ ಮಾದರಿ ’ಯುಪಿ ಕೋವಿಡ್-19 ಮಾಡೆಲ್’ ಬಹಳ ಪರಿಣಾಮಕಾರಿಯಾಗಿದೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಕೊಂಡಾಡಿದ್ದಾರೆ. ಸೋಂಕಿತರ ಸಂಪರ್ಕಿತರ ಪತ್ತೆ, ಸೋಂಕಿನ ಮುಂಗಡ ಪತ್ತೆಗೆ ಹೆಚ್ಚೆಚ್ಚು ಮಂದಿಯ ಕೊರೊನಾ ತಪಾಸಣೆ, ಸೋಂಕಿತರನ್ನು ಕಡ್ಡಾಯ ಐಸೊಲೇಷನ್‌ನಲ್ಲಿ ಇರಿಸುವುದು, ಉಚಿತ ಮತ್ತು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡಿಸಿ ಗ್ರಾಮೀಣ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಯೋಗಿ ಆದಿತ್ಯನಾಥ್ ಅವರ ಸರ್ಕಾರ ಬಹಳ ಉತ್ತಮವಾಗಿ ಮಾಡಿದೆ ಎಂದು ಜೇಸನ್ ಶಹಬ್ಬಾಸ್‌ಗಿರಿ ವ್ಯಕ್ತಪಡಿಸಿದ್ದಾರೆ. ಕಳೆದ 75ನೇ ಸ್ವಾತಂತ್ರ್ಯೋತ್ಸವ ದಿನದಂದು, ಆನ್‌ಲೈನ್‌ನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಸಂಸದ ಜೇಸನ್ ಅವರು ಮಾತುಕತೆ ನಡೆಸಿದ್ದರು. ಈ ಕಾರ್ಯಕ್ರಮಕ್ಕೆ ಸಂಸದ ಜೇಸನ್ ಅವರು ಅತಿಥಿಯಾಗಿ ವರ್ಚಯಲ್ ಮೂಲಕ ಭಾಗಿಯಾಗಲು ಕೋರಲಾಗಿತ್ತು. ಕೆಲ ದಿನಗಳ ಮುನ್ನ ಮತ್ತೊಬ್ಬ ಆಸ್ಪ್ರೇಲಿಯಾ ಸಂಸದ ಕ್ರೇಗ್ ಕೆಲ್ಲಿ ಅವರು ಡೆಲ್ಟಾ ಕೊರೊನಾ ರೂಪಾಂತರಿಯನ್ನು ನಿಯಂತ್ರಿಸಿದ ಉ.ಪ್ರ. ಸರ್ಕಾರದ ಕ್ರಮವನ್ನು ಹಾಡಿ ಹೊಗಳಿದ್ದರು. It was a delight to share my views with Indian community of Uttar Pradesh in Australia during celebration of 75th year of Indian independence and launch of UPAA Hindi E- Magzineहिंदी दिवस की हार्दिक शुभकामनाएँ। — Jason Wood (@JasonWood_MP) September 14, 2021