ಆಸ್ಟ್ರೇಲಿಯಾದ ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್ ಅವರು ಇತ್ತೀಚಿನ ಸಂಸತ್ತಿನ ಅಧಿವೇಶನದಲ್ಲಿ ಡೆಪ್ಯೂಟಿ ಸ್ಪೀಕರ್ ಶರೋನ್ ಕ್ಲೇಡನ್ ಅವರನ್ನು ಪುರುಷರಂತೆ ಪರಿಗಣಿಸಿ ಸಂಬೋಧಿಸಿದ್ದು, ಭಾರಿ ಟ್ರೋಲ್ಗೆ ಒಳಗಾಗಿದ್ದಾರೆ.
ಲೇಡಿ ಸ್ಪೀಕರ್ ಅನ್ನು ಪದೇ ಪದೇ ಮಿಸ್ಟರ್ ಸ್ಪೀಕರ್ ಎಂದು ಇವರು ಸಂಬೋಧಿಸಿದ್ದಾರೆ. ಇದರಿಂದ ಭಾರಿ ಆಕ್ರೋಶಕ್ಕೆ ಒಳಗಾದ ಬಳಿಕ ಕ್ಷಮೆ ಯಾಚಿಸಿದ್ದಾರೆ.
ಆದರೆ ಕ್ಷಮೆಯ ನಂತರವೂ ಅವರು “ಮಿಸ್ಟರ್ ಸ್ಪೀಕರ್” ಎಂದೇ ಸಂಬೋಧಿಸುವುದನ್ನು ಮುಂದುವರೆಸಿರುವ ವಿಡಿಯೋ ವೈರಲ್ ಆಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಬಿಬಿಸಿ ಹಂಚಿಕೊಂಡ ಕ್ಲಿಪ್‌ನಲ್ಲಿ ಡಟ್ಟನ್ ಸಂಸತ್ತನ್ನು ಉದ್ದೇಶಿಸಿ ಮಾತನಾಡುವುದನ್ನು ತೋರಿಸುತ್ತದೆ ಮತ್ತು ಕ್ಲೇಡನ್ ಅವರನ್ನು “ಮಿಸ್ಟರ್ ಸ್ಪೀಕರ್” ಎಂದು ಒಂದು ವಾಕ್ಯದಲ್ಲಿ ಮೂರು ಬಾರಿ ಹೇಳುವುದನ್ನು ನೋಡಬಹುದು.
ತಪ್ಪು ಲಿಂಗದಿಂದ ಸಿಟ್ಟಾದ ಕ್ಲೇಡನ್, “ನೀವು ನನ್ನನ್ನು ಸರಿಯಾಗಿ ಸಂಬೋಧಿಸಿ ಎಂದಿದ್ದಾರೆ. ಆಗ ಡಟ್ಟನ್ ಕ್ಷಮೆ ಕೋರಿದ್ದರೂ ಪುನಃ ಮಿಸ್ಟರ್ ಎಂದೇ ಹೇಳಿದ್ದಾರೆ. 18 ಬಾರಿ ಅವರು ಈ ತಪ್ಪನ್ನು ಮಾಡಿದ್ದು ಅದರ ವಿಡಿಯೋ ವೈರಲ್ ಆಗಿದೆ.