ಆಭರಣ ಪ್ರಿಯರಿಗೆ ಬಂಗಾರ ಮಾತ್ರವಲ್ಲ ಬೆಳ್ಳಿ, ವಜ್ರ ಸೇರಿದಂತೆ ಎಲ್ಲ ರೀತಿಯ ಆಭರಣ ಇಷ್ಟವಾಗುತ್ತದೆ. ಆಭರಣದ ವಿಷ್ಯದಲ್ಲಿ ಆಸಕ್ತಿ, ಅಭಿಪ್ರಾಯಗಳು ಭಿನ್ನವಾಗಿರುತ್ತವೆ. ಆಸ್ಟ್ರೇಲಿಯಾ ಮಹಿಳೆಯೊಬ್ಬಳ ಆಭರಣದ ಹವ್ಯಾಸ ಹುಬ್ಬೇರಿಸುವಂತಿದೆ. ಮಹಿಳೆ ಸತ್ತವರ ಹಲ್ಲುಗಳಿಂದ ಆಭರಣ ತಯಾರಿಸಿ ಧರಿಸುತ್ತಾಳೆ.
ಜಾಕಿ ವಿಲಿಯಮ್ಸ್, ಗ್ರೇವ್ ಮೆಟಲಮ್ ಜ್ಯುವೆಲ್ಲರ್ಸ್ ಮಾಲೀಕೆಯಾಗಿದ್ದಾಳೆ. ಹಲ್ಲುಗಳು, ಉಂಗುರಗಳಿಂದ ಹಾರ, ನೆಕ್ಲೆಸ್ ತಯಾರಿಸಿ ಧರಿಸುತ್ತಾಳೆ. ಕೆಲವು ಆಭರಣಗಳಲ್ಲಿ ಮಾನವನ ಅವಶೇಷಗಳಿವೆ. ಸತ್ತವರ ಕೂದಲು, ಬೂದಿ, ಐಯುಡಿದಿಂದ ಆಭರಣ ತಯಾರಿಸಿದ್ದಾಳೆ.
ಜಾಕಿ ಈ ಹಿಂದೆ ಸ್ಥಳೀಯ ಸ್ಮಶಾನದಲ್ಲಿ ಕೆಲಸ ಮಾಡ್ತಿದ್ದಳಂತೆ. ಸತ್ತವರ ಅವಶೇಷಗಳಿಂದ ಆಭರಣಗಳನ್ನು ತಯಾರಿಸುವ ಕಲ್ಪನೆ ಸಾಮಾನ್ಯವಾಗಿ, ಒಬ್ಬ ಸಾಮಾನ್ಯ ವ್ಯಕ್ತಿಗೆ ಬರಲು ಸಾಧ್ಯವಿಲ್ಲ. ನಾನು ಸ್ವಲ್ಪ ಅನಾರೋಗ್ಯದಿಂದ ಬಳಲುತ್ತಿದ್ದೇನೆಂದು ಎಂಬುದನ್ನು ಜಾಕಿ ಒಪ್ಪಿಕೊಂಡಿದ್ದಾಳೆ.
ಸತ್ತ ವ್ಯಕ್ತಿಯ ಕುಟುಂಬಸ್ಥರ ಕೋರಿಕೆ ಮೇರೆಗೆ ಮಾತ್ರ ಆಭರಣ ತಯಾರಿಸುತ್ತಾಳೆ. ವಿಶೇಷ ಆರ್ಡರ್ ಬಂದಲ್ಲಿ ಮಾತ್ರ ಆಭರಣ ತಯಾರಿಸುತ್ತೇನೆಂದು ಜಾಕಿ ಹೇಳಿದ್ದಾಳೆ. 2017ರಲ್ಲಿ ಆಭರಣ ತಯಾರಿಕೆ ಕ್ಷೇತ್ರದಲ್ಲಿ ಡಿಪ್ಲೋಮಾ ಮಾಡಿದ್ದ ಜಾಕಿ ನಂತ್ರ ಕೆಲವು ಕಡೆ ಕೆಲಸ ಮಾಡಿದ್ದಳು. ನಂತ್ರ ಸ್ವಂತ ಉದ್ಯೋಗ ಶುರು ಮಾಡಿದ್ದಾಳೆ.