ಆನ್ಲೈನ್ ನಲ್ಲಿ ಯಾರು, ಯಾರ ಜೊತೆ ಮಾತನಾಡ್ತಿದ್ದಾರೆ ಎನ್ನುವ ಕ್ಲಾರಿಟಿ ಸಿಗೋದಿಲ್ಲ. ಅನೇಕರು ತಮ್ಮ ಹೆಸರು, ಫೋಟೋ ಬದಲಿಸಿಕೊಂಡು ಚಾಟ್ ಮಾಡ್ತಿರುತ್ತಾರೆ. ಇದು ಕೆಲವರ ದಾಂಪತ್ಯ ಜೀವನವನ್ನು ಹಾಳು ಮಾಡಿದೆ. ಆಸ್ಟ್ರೇಲಿಯಾದ ಮೂಲದ ಅಡಲ್ಟ್ ಕಂಟೆಂಟ್ ಕ್ರಿಯೇಟರ್ ಹನಿ ಬ್ರೂಕ್ಸ್ ತನ್ನ ಜೀವನದಲ್ಲಾದ ಘಟನೆಯನ್ನು ವಿಡಿಯೋ ಮಾಡಿದ್ದಾಳೆ.
ಹನಿಯ ಎಕ್ಸ್ ರೇಟೆಡ್ ಖಾತೆಗೆ ಮೂರು ತಿಂಗಳ ಹಿಂದೆ ನಿರಂತರ ಸಂದೇಶವೊಂದು ಬಂದಿತ್ತು. ಆ ಖಾತೆಯಲ್ಲಿ ಯಾವುದೇ ವ್ಯಕ್ತಿ ತನ್ನ ನಿಜವಾದ ಹೆಸರು ಹೇಳೋದಿಲ್ಲ. ಬಹುತೇಕರು ಬೇರೆ ಹೆಸರು, ಫೋಟೋ ಮೂಲಕವೇ ಚಾಟ್ ಮಾಡ್ತಾರೆ. ಸಂದೇಶ ಬಂದ ವ್ಯಕ್ತಿ ಜೊತೆ ಹನಿ ಚಾಟಿಂಗ್ ಶುರು ಮಾಡಿದ್ದಳು. ಇಬ್ಬರ ಮಧ್ಯೆ ಅನೇಕ ಖಾಸಗಿ ವಿಷ್ಯಗಳು ಚರ್ಚೆಯಾಗ್ತಿದ್ದವು. ಆದ್ರೆ ಈಗ ಒಂದು ತಿಂಗಳ ಹಿಂದೆ ಆತನ ಮೆಸ್ಸೇಜ್ ಬರೋದು ನಿಂತಿದೆ. ಆತನ ಪತ್ನಿಗೆ ವಿಷ್ಯ ಗೊತ್ತಾಗಿರಬೇಕು ಎಂದುಕೊಂಡು ಹನಿ ಸುಮ್ಮನಾಗಿದ್ದಳು. ಆದ್ರೆ ಕೊನೆಯಲ್ಲಿ ಆಕೆಗೆ ಭಯಾನಕ ಸತ್ಯ ಗೊತ್ತಾಗಿದೆ. ಹನಿಯ ಆಪ್ತ ಸ್ನೇಹಿತೆ ದಾಂಪತ್ಯಕ್ಕೆ ಹನಿ ಮುಳುವಾಗಿದ್ದಾಳೆ.
ಹನಿ, ಸ್ನೇಹಿತೆಯ ಪತಿಯನ್ನು ಅನೇಕ ಬಾರಿ ಭೇಟಿ ಆಗಿದ್ದಳು. ಕುಟುಂಬಸ್ಥರು ಕೆಲ ಬಾರಿ ಡಿನ್ನರ್ ಗೆ ಹೋಗಿದ್ದರು. ಆದ್ರೆ ತನ್ನ ಜೊತೆ ಚಾಟ್ ಮಾಡಿದ ವ್ಯಕ್ತಿ ಸ್ನೇಹಿತೆ ಪತಿ ಎನ್ನುವುದು ಹನಿಗೆ ಗೊತ್ತಿರಲಿಲ್ಲ. ಸ್ನೇಹಿತೆ ದಾಂಪತ್ಯ ಮುರಿದು ಬಿದ್ಮೇಲೆ ವಿಷ್ಯ ಹೊರ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಹನಿ ಪೋಸ್ಟ್ ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಸ್ನೇಹಿತೆ ಇಬ್ಬರನ್ನೂ ಕ್ಷಮಿಸಬೇಕು ಎಂದು ಕೆಲವರು ಹೇಳಿದ್ರೆ ಮತ್ತೆ ಕೆಲವರು ಮೋಸ ಮಾಡುವವರು ಯಾವಾಗ್ಲೂ ಮೋಸ ಮಾಡ್ತಿರುತ್ತಾರೆ. ಹಾಗಾಗಿ ಇಲ್ಲಿ ಕ್ಷಮೆ ಅಗತ್ಯವಿಲ್ಲ ಎಂದಿದ್ದಾರೆ.