ಮಾಜಿ ಮೇಯರ್ ನ ಪಾದರಕ್ಷೆಗಳನ್ನು ಕಚ್ಚಿಕೊಂಡು ಹೋದ ಬೀದಿನಾಯಿಗಳ ಮೇಲೆ ಮಹಾರಾಷ್ಟ್ರದ ಔರಂಗಾಬಾದ್ ನಾಗರಿಕ ಸಂಸ್ಥೆಯು ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಿದೆ.
ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ತಮ್ಮ ಮನೆಯ ಬಾಗಿಲಿನಿಂದ ಪಾದರಕ್ಷೆಗಳನ್ನು ನಾಯಿಗಳು ಕಚ್ಚಿಕೊಂಡು ಹೋಗಿವೆ ಎಂದು ಮಾಜಿ ಮೇಯರ್ ದೂರು ನೀಡಿದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ನಗರದ ನಕ್ಷತ್ರವಾಡಿ ಬಡಾವಣೆಯಲ್ಲಿ ವಾಸವಾಗಿರುವ ಮಾಜಿ ಮೇಯರ್ ನಂದಕುಮಾರ ಘೋಡೆಲೆ ಅವರ ಮನೆಯಲ್ಲಿ ಸೋಮವಾರ ರಾತ್ರಿ ಪಾದರಕ್ಷೆಗಳು ನಾಪತ್ತೆಯಾಗಿದ್ದವು. ಘೋಡೆಲೆ ಅವರ ಮನೆಯ ಕಾಂಪೌಂಡ್ ಗೇಟ್ ತೆರೆದಿದ್ದಾಗ ರಾತ್ರಿ ಮನೆ ಆವರಣಕ್ಕೆ ಬಂದ ಬೀದಿ ನಾಯಿಗಳು ಪಾದರಕ್ಷೆಗಳನ್ನ ಕಚ್ಚಿಕೊಂಡು ಹೋಗಿದ್ದವು.
ಪಾದರಕ್ಷೆ ನಾಪತ್ತೆಯಾಗಿದ್ದು ಅವುಗಳನ್ನು ನಾಯಿಗಳು ಕಚ್ಚಿಕೊಂಡು ಹೋಗಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದರಿಂದ ಕುಪಿತಗೊಂಡ ನಂದಕುಮಾರ್ ಘೋಡೆಲೆ ಔರಂಗಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಗೆ ದೂರಿದ್ರು. ಬಳಿಕ ಅಧಿಕಾರಿಗಳು ನಾಯಿ ಹಿಡಿಯುವ ತಂಡವನ್ನು ಕರೆಸಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು .
ಘೋಡೆಲೆ ವಾಸಿಸುವ ಪ್ರದೇಶದಲ್ಲಿ ತಂಡವು ಪಾದರಕ್ಷೆ ಹೊತ್ತುಕೊಂಡು ಹೋಗಿದ್ದ ನಾಲ್ಕು ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿದೆ. ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಆದರೆ ಬೀದಿ ನಾಯಿಗಳ ಕಾಟದ ಬಗ್ಗೆ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದ್ದು, ಕಾರ್ಯಾಚರಣೆ ಇದು ವಾಡಿಕೆಯ ಕಾರ್ಯವಿಧಾನವಾಗಿದೆ ಎಂದು ನಾಗರಿಕ ಸಂಸ್ಥೆ ಸಮರ್ಥಿಸಿಕೊಂಡಿದೆ.