
ಉತ್ತರಪ್ರದೇಶದ ಗೊಂಡಾದಲ್ಲಿ ವಿಧವೆ ಮಹಿಳೆಯೊಬ್ಬಳು, ಸೋದರಳಿಯನ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರ ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಇದ್ರಿಂದ ಮನನೊಂದ ಜೋಡಿ, ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದೆ.
ಮಹಿಳೆ ಪತಿ ಸಾವನ್ನಪ್ಪಿದ್ದಾನೆ. ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ. ಆಕೆ ಸೋದರಳಿಯ ಮಹಿಳೆ ಮನೆಯಲ್ಲಿ ವಾಸವಾಗಿದ್ದ. ಇಬ್ಬರ ಮಧ್ಯೆ ಪ್ರೀತಿ ಚಿಗುರಿದೆ. ಇಬ್ಬರ ವಿಷ್ಯ ಮನೆಯವರಿಗೆ ಗೊತ್ತಾಗಿದೆ. ಸೋದರಳಿಯನ ಮನೆಯವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆತನಿಗೆ ಬೇರೆ ಮದುವೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಆದ್ರೆ ಸೋದರಳಿಯ ಕೂಡ ಮಹಿಳೆಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.
ಪರಸ್ಪರ ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವಾಗದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳೆಗಿಂತ ಆಕೆ ಸೋದರಳಿಯ 10 ವರ್ಷ ಚಿಕ್ಕವನು ಎನ್ನಲಾಗಿದೆ. ವೇಗವಾಗಿ ಬರ್ತಿದ್ದ ರೈಲಿನ ಮುಂದೆ ಇಬ್ಬರು ಹಾರಿ ಪ್ರಾಣ ಬಿಟ್ಟಿದ್ದಾರೆ. ಮಹಿಳೆ ಪ್ರೀತಿಗೆ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.
ಇತಿಯಾಥೋಕ್ ಪ್ರದೇಶದ 32 ವರ್ಷದ ವಿಧವೆ ಹಾಗೂ 22 ವರ್ಷದ ಸೋದರಳಿಯ ರವೀಂದ್ರ ಕುಮಾರ್ ಆತ್ಮಹತ್ಯೆ ಮಾಡಿಕೊಂಡವರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.