alex Certify Audi, BMWಗೆ ಪೈಪೋಟಿ ನೀಡಲು ಬರ್ತಿವೆ ಮರ್ಸಿಡಿಸ್‌ನ ಬೆಂಜ್‌ ನ ಹೊಸ SUV: ಭಾರತದಲ್ಲಿ ಬಿಡುಗಡೆ ದಿನಾಂಕ ಫಿಕ್ಸ್‌…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Audi, BMWಗೆ ಪೈಪೋಟಿ ನೀಡಲು ಬರ್ತಿವೆ ಮರ್ಸಿಡಿಸ್‌ನ ಬೆಂಜ್‌ ನ ಹೊಸ SUV: ಭಾರತದಲ್ಲಿ ಬಿಡುಗಡೆ ದಿನಾಂಕ ಫಿಕ್ಸ್‌…!

ಆಡಿ, ಬಿಎಂಡಬ್ಲ್ಯೂನಂತಹ ಐಷಾರಾಮಿ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಮರ್ಸಿಡಿಸ್‌ ಬೆಂಝ್‌ ಹೊಸದಾದ ಎರಡು ಎಸ್‌ಯುವಿಗಳನ್ನು ಬಿಡುಗಡೆ ಮಾಡ್ತಿದೆ. Mercedes-Benz GLB ಮತ್ತು ಅದರ ಎಲೆಕ್ಟ್ರಿಕ್ ಆವೃತ್ತಿಯಾದ Mercedes-Benz EQB ಬಿಡುಗಡೆ ದಿನಾಂಕಗಳನ್ನು ಕಂಪನಿ ದೃಢಪಡಿಸಿದೆ. ಈ ಎರಡೂ ಐಷಾರಾಮಿ SUV ಕಾರುಗಳು ಡಿಸೆಂಬರ್ 2 ರಂದು ಭಾರತದಲ್ಲಿ ಬಿಡುಗಡೆಯಾಗಲಿವೆ.

ಇದು 7 ಆಸನಗಳ ಎಸ್‌ಯುವಿ. GLBಯ ವರ್ಲ್ಡ್‌ ಪ್ರೀಮಿಯರ್‌ ಸುಮಾರು ಎರಡೂವರೆ ವರ್ಷಗಳ ಹಿಂದೆಯೇ ನಡೆದಿತ್ತು. ಎಲೆಕ್ಟ್ರಿಕ್ ಆವೃತ್ತಿ EQS ಅನ್ನು 2021ರ ಎಪ್ರಿಲ್‌ನಲ್ಲಿ ಪ್ರದರ್ಶಿಸಲಾಯ್ತು. EQS, ಮರ್ಸಿಡಿಸ್‌ ಕಂಪನಿಯ ಮೊದಲ 7 ಆಸನಗಳ ಎಲೆಕ್ಟ್ರಿಕ್ ಕಾರು.

Mercedes-Benz GLB ರಫ್‌ & ಟಫ್‌ SUV. ಇದು ಕಾಂಪ್ಯಾಕ್ಟ್ ವಿನ್ಯಾಸ ಮತ್ತು ಬಾಕ್ಸಿ ಶೈಲಿಯನ್ನು ಹೊಂದಿದೆ. ಇವುಗಳಲ್ಲಿ ಮೂರನೇ ಸಾಲಿನ ಪ್ರಯಾಣಿಕರ ಆಸನವೂ ಲಭ್ಯವಿದೆ. ಇದು ಮಹೀಂದ್ರ XUV700, MG ಹೆಕ್ಟರ್ ಮತ್ತು ಟಾಟಾ ಸಫಾರಿಯಂತಹ SUVಗಳಿಗೆ ಪೈಪೋಟಿ ನೀಡಲಿದೆ.  BMW ಮತ್ತು Audi ಕಾರುಗಳಿಗೂ ಪ್ರತಿಸ್ಪರ್ಧಿಯಾಗಿದೆ. ಎರಡೂ ಕಾರುಗಳಲ್ಲಿ ಬಹಳಷ್ಟು ಹೋಲಿಕೆಗಳಿವೆ.

ಸಂಯೋಜಿತ ಡಿಜಿಟಲ್ ಸೆಟಪ್ ಮತ್ತು ಸೆಂಟ್ರಲ್ MBUX ಇನ್ಫೋಟೈನ್‌ಮೆಂಟ್ ಟಚ್‌ ಸ್ಕ್ರೀನ್ ಸಿಸ್ಟಮ್ ಅನ್ನು ಒಳಗೊಂಡಿವೆ. ಆಂಬಿಯೆಂಟ್ ಲೈಟಿಂಗ್, ಪವರ್ ಅಡ್ಜಸ್ಟೇಬಲ್ ಫ್ರಂಟ್ ಸೀಟ್, ಮಸಾಜ್ ಫಂಕ್ಷನ್ ಮತ್ತು ಪ್ರೀಮಿಯಂ ಆಡಿಯೋ ಸಿಸ್ಟಮ್ ಮುಂತಾದ ವೈಶಿಷ್ಟ್ಯಗಳನ್ನು ಇವುಗಳಲ್ಲಿರಲಿದೆ. GLBಯಲ್ಲಿ 2-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಿವೆ. EQB ನಲ್ಲಿ 66.5kwh ಬ್ಯಾಟರಿ ಪ್ಯಾಕ್ ನೀಡುವ ಸಾಧ್ಯತೆ ಇದೆ.

ಎರಡೂ ಆಲ್-ವೀಲ್-ಡ್ರೈವ್‌ನೊಂದಿಗೆ ಬರುವ ನಿರೀಕ್ಷೆ ಇದೆ. ಎಲೆಕ್ಟ್ರಿಕ್ ಎಸ್‌ಯುವಿ ಸಂಪೂರ್ಣ ಚಾರ್ಜ್‌ನಲ್ಲಿ 400 ಕಿಮೀಗಿಂತ ಹೆಚ್ಚಿನ ವ್ಯಾಪ್ತಿಯನ್ನು ನೀಡುತ್ತದೆ. Mercedes-Benz ನ ಈ ಎರಡೂ SUV ಗಳ ಬುಕಿಂಗ್ ಪ್ರಾರಂಭವಾಗಿದೆ. ಗ್ರಾಹಕರು 1.5 ಲಕ್ಷ ಟೋಕನ್ ಮೊತ್ತದೊಂದಿಗೆ ಬುಕ್ಕಿಂಗ್‌ ಮಾಡಬಹುದು. Mercedes-Benz GLB ಬೆಲೆ ಅಂದಾಜು 55 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ. ಎಲೆಕ್ಟ್ರಿಕ್ ಆವೃತ್ತಿಗೆ 65 ಲಕ್ಷ ರೂಪಾಯಿ ನಿಗದಿ ಮಾಡಬಹುದು ಅನ್ನೋದು ತಜ್ಞರ ಲೆಕ್ಕಾಚಾರ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...