alex Certify ರಾಜ್ಯದ ಮಹಿಳೆಯರೇ ಗಮನಿಸಿ : ‘ಸಖಿ’ ಒನ್ ಸ್ಟಾಪ್ ಸೆಂಟರ್ ನಲ್ಲಿ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಮಹಿಳೆಯರೇ ಗಮನಿಸಿ : ‘ಸಖಿ’ ಒನ್ ಸ್ಟಾಪ್ ಸೆಂಟರ್ ನಲ್ಲಿ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು..!

ಬೆಂಗಳೂರು : ಸಂಕಷ್ಟದಲ್ಲಿರುವ ಮಹಿಳೆಯರಿಗೆ ಒಂದೇ ಸೂರಿನಡಿ ಹಲವು ಪರಿಹಾರ ನೀಡಲು ರಾಜ್ಯ ‘ಸಖಿ’ ಒನ್ ಸ್ಟಾಪ್ ಸೆಂಟರ್’ ಆರಂಭಿಸಿದೆ.

ಕುಟುಂಬ, ಸಮುದಾಯ, ಕೆಲಸದ ಸ್ಥಳಗಳು, ಖಾಸಗಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದೌರ್ಜನ್ಯಕ್ಕೊಳಗಾದ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ನೆರವು ಒದಗಿಸಲು 24/7 ಕಾರ್ಯ ನಿರ್ವಹಿಸುತ್ತಿದೆ

ಶಿವಮೊಗ್ಗದಲ್ಲಿ ‘ಸಖಿ’ ಒನ್ ಸ್ಟಾಪ್ ಸೆಂಟರ್

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ನಗರದ ಆಲ್ಕೋಳ ವೃತ್ತದ ಬಳಿ ಸರ್ಕಾರಿ ಬಾಲಕರ ಬಾಲ ಮಂದಿರದ ಆವರಣದಲ್ಲಿ ನೊಂದ ಮಹಿಳೆಯರಿಗಾಗಿ ‘ಸಖಿ’ ಒನ್ ಸ್ಟಾಪ್ ಸೆಂಟರ್ ಕಾರ್ಯನಿರ್ವಹಿಸುತ್ತಿದೆ.
ದೆಹಲಿಯ ನಿರ್ಭಯಾ ಪ್ರಕರಣದ ಬಳಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು-ಹೆಣ್ಣುಮಕ್ಕಳಿಗೆ ಒಂದೇ ಸೂರಿನಡಿ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರವು 2014–14 ರಲ್ಲಿ ಗೆಳತಿ ಚಿಕಿತ್ಸಾ ಘಟಕಗಳನ್ನು ಆರಂಭಿಸಿತು. 2019 ರಲ್ಲಿ ಈ ಕೇಂದ್ರಗಳನ್ನು ಕೇಂದ್ರ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ‘ಸಖಿ’ ಒನ್ ಸ್ಟಾಪ್ ಸೆಂಟರ್ ಎಂದು ಮರು ನಾಮಕರಣ ಮಾಡಿದೆ.

ಬಾಲಾಪರಾಧ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ-2000 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ-2012(ಪೋಕ್ಸೋ) ರ ಅಡಿಯಲ್ಲಿ ಸ್ಥಾಪಿಸಲಾದ ಸಂಸ್ಥೆಗಳು ಮತ್ತು ಪ್ರಾಧಿಕಾರಗಳು “ಸಖಿ ಒನ್ ಸ್ಟಾಪ್ ಸೆಂಟರ್ನೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.

‘ಸಖಿ’ ಒನ್ ಸ್ಟಾಪ್ ಸೆಂಟರ್ ಯಾವುದೇ ಜಾತಿ, ವರ್ಗ, ಧರ್ಮ, ಪ್ರದೇಶ, ಲೈಂಗಿಕ ದೃಷ್ಟಿಕೋನ ಅಥವಾ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೆ ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು(ಪೋಕ್ಸೋ), ಕೌಟುಂಬಿಕ ಕಲಹಗಳ ದೌರ್ಜನ್ಯ,ಮಾನಸಿಕ ಅಸ್ವಸ್ಥೆಯರು, 18 ವರ್ಷ ಮೇಲ್ಪಟ್ಟ ಪ್ರಾಪ್ತ ವಯಸ್ಕ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ, ವರದಕ್ಷಣೆ ಕಿರುಕುಳ, ಸೈಬರ್ ಅಪರಾಧ, ದ್ವಿಪತ್ನಿತ್ವ ಪ್ರಕರಣ,ಬಾಲ್ಯವಿವಾಹ, ಅಪಹರಣ ಪ್ರಕರಣ, ವಿಷ ಸೇವನೆ, ಮಾನಸಿಕ ಹಿಂಸೆ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಿ ನೊಂದವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತಿದೆ.

ಒಂದೇ ಸೂರಿನಡಿ 5 ಸೌಲಭ್ಯಗಳು 

ನೊಂದವರಿಗೆ ತಾತ್ಕಾಲಿಕ ಆಶ್ರಯ, ಆಪ್ತ ಸಮಾಲೋಚನೆ, ವೈದ್ಯಕೀಯ ನೆರವು, ಪೊಲೀಸ್ ನೆರವು, ಕಾನೂನು ನೆರವು ಈ ಐದು ಸೌಲಭ್ಯಗಳ ಮೂಲಕ ದೌರ್ಜನ್ಯಕ್ಕೊಳಗಾದ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ನೆರವು ನೀಡಲಾಗುತ್ತದೆ.

ಸಂತ್ರಸ್ತರು ನೀಡಿದ ದೂರಿನ ಆಧಾರದ ಮೇಲೆ ವೈದ್ಯಾಧಿಕಾರಿಗಳ ಮೂಲಕ ವೈದ್ಯಕೀಯ ಪರೀಕ್ಷೆ ಮಾಡಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ. ತಜ್ಞರಿಂದ ಅಗತ್ಯ ಆಪ್ತ ಸಮಾಲೋಚನೆ ಮಾಡಿಸುವ ಮೂಲಕ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತದೆ. ದೂರು ನೀಡಿದ ಬಳಿಕ ಪೆÇಲೀಸ್ ಮಹಾನಿರ್ದೇಶಕರಿಂದ ನಿಯೋಜಿಸ್ಪಟ್ಟ ಇನ್ಸ್ಪೆಕ್ಟರ್ ದರ್ಜೆಯ ಮಹಿಳಾ ಪೆÇಲೀಸ್ ಅಧಿಕಾರಿಯೊಬ್ಬರು ಕೇಂದ್ರಕ್ಕೆ ಭೇಟಿ ನೀಡಿ ಎಫ್ಐಆರ್ ದಾಖಲಿಸಿಕೊಳ್ಳುತ್ತಾರೆ. ಬಳಿಕ ಅದನ್ನು ಸಂಬಂಧಪಟ್ಟ ಪೆÇಲೀಸ್ ಠಾಣೆಗೆ ವರ್ಗಾಯಿಸಲಾಗುತ್ತದೆ. ಬಳಿಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನೇಮಿಸಲ್ಪಟ್ಟ ಕಾನೂನು ಸಲಹೆಗಾರರಿಂದ ಅಗತ್ಯ ಕಾನೂನು ನೆರವು ಒದಗಿಸಲಾಗುತ್ತದೆ. ಅಲ್ಲದೆ, ದೌರ್ಜನ್ಯಕ್ಕೊಳಗಾದ ಮಹಿಳೆಯರು ಹಾಗೂ ಮಕ್ಕಳಿಗೆ ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂ ಸೇವಾ ಸಂಸ್ಥೆ ಅಥವಾ ಸರ್ಕಾರಿ ಗೃಹಗಳಲ್ಲಿ ಆಶ್ರಯ ಒದಗಿಸಿ ರಕ್ಷಣೆ ನೀಡಲಾಗುತ್ತದೆ. ಸಂತ್ರಸ್ತರು ನೇರವಾಗಿ ಕೇಂದ್ರಕ್ಕೆ ಬಂದು ದೂರು ನೀಡಬಹುದು.

ಶಿವಮೊಗ್ಗ ಜಿಲ್ಲೆ ‘ಸಖಿ’ ಒನ್ ಸ್ಟಾಪ್ ಸೆಂಟರ್ನಲ್ಲಿ 2019 ರಿಂದ ಇಲ್ಲಿಯವರೆಗೂ 1400 ಜನ ಮಹಿಳೆಯರು-ಹೆಣ್ಣುಮಕ್ಕಳು ದೂರು ನೀಡಿದ್ದಾರೆ. ಈ ದೂರುಗಳ ಪೈಕಿ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ ದೂರುಗಳ ಸಂಖ್ಯೆಯೇ ಹೆಚ್ಚಾಗಿದೆ.

ಕೌಟುಂಬಿಕ ದೌರ್ಜನ್ಯ 776 ಪ್ರರಣಗಳು, ಅತ್ಯಾಚಾರ 135, ಲೈಂಗಿಕ ಅಪರಾಧ /ಕಿರುಕುಳ/ಹಲ್ಲೆ/ದೌರ್ಜನ್ಯ 41, ಆಸಿಡ್ ದಾಳಿ 1 , ಮಹಿಳೆ ಸಾಗಾಣಿಕೆ 1, ಲೈಂಗಿಕ ದುರುಪಯೋಗಕ್ಕೆ ಒಳಗಾದವರ ಸಂಖ್ಯೆ 107, ಬಾಲ್ಯ ವಿವಾಹ 76, ಕಾಣೆಯಾದ ಮತ್ತು ಅಪಹರಣ 76, ಸೈಬರ್ ಅಪರಾಧ 11, ವರದಕ್ಷಿಣೆ ಕಿರುಕುಳ 33, ಇನ್ನಿತರೆ ದೌರ್ಜನ್ಯಗಳು 144 ಪ್ರಕರಣಗಳು ಸೇರಿ ಒಟ್ಟು 1400 ಪ್ರಕರಣ ದಾಖಲಾಗಿದೆ.

ಈ ಪ್ರಕರಣಗಳಲ್ಲಿ ಈವರೆಗೆ 1179 ಸಂತ್ರಸ್ತರಿಗೆ ಕಾನೂನು ನೆರವು ಮತ್ತು ಸಮಾಲೋಚನೆ ನೀಡಲಾಗಿದ್ದು, 447 ವೈದ್ಯಕೀಯ ನೆರವು ನೀಡಲಾಗಿದೆ. ದೌರ್ಜನ್ಯಕ್ಕೊಳಗಾಗಿ ಮನೊರೋಗದಿಂದ ಬಳಲುತ್ತಿದ್ದ 1092 ಜನರನ್ನು ಸಮಾಲೋಚನೆಗೆ ಒಳಪಡಿಸಲಾಗಿದೆ. 476 ಜನರಿಗೆ ಪೋಲಿಸ್ ನೆರವು, 234 ಜನರಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ.

ಸಖಿ ಕೇಂದ್ರವು 24/7 ಗಂಟೆ ಕೆಲಸ ಮಾಡುತ್ತದೆ. ಇದರ ಮೇಲ್ವಿಚಾರಣೆ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವಹಿಸಲಾಗಿದೆ. ಇಲ್ಲಿ ಒಬ್ಬರು ಘಟಕ ಆಡಳಿತಾಧಿಕಾರಿ, ಒಬ್ಬರು ಆಪ್ತ ಸಮಾಲೋಚಕರು, ಇಬ್ಬರು ವಿಷಯ ನಿರ್ವಾಹಕರು, ಇಬ್ಬರು ಕಾನೂನು ಸಲಹೆಗಾರರು, ಭದ್ರತಾ ಸಿಬ್ಬಂದಿ ಹಾಗೂ ಸಹಾಯಕರು ಕಾರ್ಯ ನಿರ್ವಹಿಸುತ್ತಾರೆ.

ಸಂಪರ್ಕ ವಿಳಾಸ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರಿ ಬಾಲಕರ ಬಾಲ ಮಂದಿರ ಆವರಣ,100 ಅಡಿ ರಸ್ತೆ, ಆಲ್ಕೋಳ,ಶಿವಮೊಗ್ಗ, ಸಖಿ ದೂರವಾಣಿ-08187-223055, ಉಪ ನಿರ್ದೇಶಕರ ಕಛೇರಿ :08182-295514 ಜಿಲ್ಲಾ ಮಕ್ಕಳ ರಕ್ಷಣಾ ಘಟಕ:08182-295709,ಉಚಿತ ಮಕ್ಕಳ ಸಹಾಯವಾಣಿ-1098, ಉಚಿತ ಮಹಿಳಾ ಸಹಾಯವಾಣಿ-181. ಸಂಪರ್ಕಿಸಬಹುದಾಗಿದೆ.

 

 

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...