ಭಾರತೀಯ ರೈಲ್ವೆಯಲ್ಲಿ ಹಲವು ಬದಲಾವಣೆ ಜನರ ಅರಿವಿಗೆ ಬರುತ್ತಿದೆ. ಇದೀಗ ಹೊಸ ಕ್ರಮವೊಂದು ಜಾರಿಯಾಗಿದ್ದು, ಅನೇಕರಿಗೆ ಉಪಯೋಗಕ್ಕೆ ಬರಬಹುದು. ರೈಲ್ವೆ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಪ್ರಾರಂಭಿಸುವ 24 ಗಂಟೆಗಳ ಮೊದಲು ತಮ್ಮ ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸಬಹುದು.
ಐಆರ್‌ಸಿಟಿಸಿ ನಿಯಮದ ಪ್ರಕಾರ ಒಬ್ಬರು ತಮ್ಮ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಿದ್ದರೆ ಬೋರ್ಡಿಂಗ್ ಸ್ಟೇಷನ್ ಅನ್ನು ಬದಲಾಯಿಸಬಹುದು. ಈ ಸೌಲಭ್ಯವು ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಟಿಕೆಟ್‌ಗಳಲ್ಲಿ ಮಾತ್ರ ಲಭ್ಯವಿರುತ್ತದೆ ಮತ್ತು ಟ್ರಾವೆಲ್ ಏಜೆಂಟ್‌ಗಳ ಮೂಲಕ ಮಾಡಿದ್ದರೆ ಸಾಧ್ಯವಿಲ್ಲ ಎಂಬುದನ್ನು ಪ್ರಯಾಣಿಕರು ಗಮನಿಸಬೇಕು.
ನಿಮ್ಮ ಹೇರ್ ರೂಟ್ಸ್ ಗೆ ಇಲ್ಲಿದೆ ʼನೈಸರ್ಗಿಕʼ ಪರಿಹಾರ
ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸಲು ಹಂತ ಹಂತದ ಮಾರ್ಗದರ್ಶಿಗಾಗಿ ಐಆರ್‌ಸಿಟಿದಿ ಅಧಿಕೃತ ವೆಬ್‌ಸೈಟ್ https://www.irctc.co.in/nget/train-search ಗೆ ಹೋಗಬೇಕಾಗುತ್ತದೆ.
– ನಿಮ್ಮ ಲಾಗಿನ್ ವಿವರಗಳು ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
– ‘ಬುಕಿಂಗ್ ಟಿಕೆಟ್ ಹಿಸ್ಟರಿ’ ಗೆ ನ್ಯಾವಿಗೇಟ್ ಮಾಡಿ.
– ನಿಮ್ಮ ರೈಲನ್ನು ಆಯ್ಕೆಮಾಡಿ ಮತ್ತು ‘ಬೋರ್ಡಿಂಗ್ ಪಾಯಿಂಟ್ ಬದಲಾಯಿಸಿ’ಗೆ ಹೋಗಿ.
– ನಿಮ್ಮನ್ನು ಹೊಸ ಪುಟಕ್ಕೆ ನಿರ್ದೇಶಿಸಲಾಗುತ್ತದೆ, ಡ್ರಾಪ್ ಡೌನ್ ಮೆನುವಿನಲ್ಲಿ ಆ ರೈಲಿಗೆ ಹೊಸ ಬೋರ್ಡಿಂಗ್ ಸ್ಟೇಷನ್ ಅನ್ನು ಆಯ್ಕೆ ಮಾಡಿ.
– ಹೊಸ ನಿಲ್ದಾಣವನ್ನು ಆಯ್ಕೆ ಮಾಡಿದ ನಂತರ, ಸಿಸ್ಟಮ್ ನಿಮ್ಮ ದೃಢೀಕರಣವನ್ನು ಕೇಳುತ್ತದೆ.
– ಬಳಿಕ ‘ಸರಿ’ ಕ್ಲಿಕ್ ಮಾಡಿ.