ಕೋವಿಡ್ ಸಂಬಂಧಿ ಲಾಕ್‌ಡೌನ್ ನಿರ್ಬಂಧಗಳ ಸಡಿಲಿಕೆಯಾಗುತ್ತಿದ್ದಂತೆಯೇ, ಪ್ರಯಾಣಿಕರ ಓಡಾಟ ಹೆಚ್ಚಾಗಿ ರೈಲುಗಳಲ್ಲಿ ಟಿಕೆಟ್ ಸಿಗುವುದು ಕಷ್ಟವಾಗಿದೆ.
ಸಿಕ್ಕಾಪಟ್ಟೆ ಬೇಡಿಕೆ ಇರುವ ಕಾರಣ ಜನರು ರೈಲು ಟಿಕೆಟ್‌ಗಳನ್ನು ಐಆರ್‌ಸಿಟಿಸಿಯಲ್ಲಿ ತತ್ಕಾಲ್‌ನಲ್ಲಿ ಬುಕ್ ಮಾಡುತ್ತಿದ್ದಾರೆ. ಆದರೆ ಎಲ್ಲರಿಗೂ ಖಾತ್ರಿಯಾದ ಟಿಕೆಟ್ ಸಿಗುವುದು ಸಾಧ್ಯವಾಗುತ್ತಿಲ್ಲ. ಬಹಳಷ್ಟು ಮಂದಿ ದಿಢೀರ್ ಪ್ರಯಾಣದ ಯೋಜನೆಗಳನ್ನು ಮಾಡುತ್ತಿರುವ ಕಾರಣ ತತ್ಕಾಲ್‌ನಲ್ಲೂ ಟಿಕೆಟ್‌ಗಳ ಬುಕಿಂಗ್ ಕಷ್ಟವಾಗಿದೆ.
ಬೆಳಕು ಯೋಜನೆ ಯಶಸ್ವಿ: 100 ದಿನದಲ್ಲಿ 1.2 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ
ನಿಮ್ಮ ಇಚ್ಛೆಯ ದಿನದಂದು ತತ್ಕಾಲ್ ಟಿಕೆಟ್ ಬುಕ್ ಮಾಡುವುದು ಹೇಗೆ ?
ಎಸಿ ಕೋಚ್‌ಗಳಿಗೆ ತತ್ಕಾಲ್ ಟಿಕೆಟ್ ಬುಕಿಂಗ್ ಬೆಳಿಗ್ಗೆ 10 ಗಂಟೆಗೆ ಹಾಗೂ ಎಸಿಯೇತರ ಟಿಕೆಟ್‌ಗಳ ಬುಕಿಂಗ್‌ಗೆ ಬೆಳಿಗ್ಗೆ 11ಗಂಟೆಗೆ ಆರಂಭಗೊಳ್ಳುತ್ತದೆ. ಬಹಳಷ್ಟು ಬಾರಿ, ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡುವ ವೇಳೆ ಪ್ರಯಾಣಿಕರು ಆನ್ಲೈನ್‌ನಲ್ಲಿ ವಿವರವಾದ ಅರ್ಜಿಗಳನ್ನು ಭರ್ತಿ ಮಾಡಿ, ಕ್ಯಾಪ್ಚಾ ಭರಿಸಲು ಬಹಳ ಸಮಯ ಹಿಡಿಯುತ್ತದೆ. ಇಷ್ಟು ಅವಧಿಯಲ್ಲಿ ಟಿಕೆಟ್‌ಗಳು ಅದಾಗಲೇ ಬುಕ್ ಆಗಿಬಿಟ್ಟಿರುವ ಸಾಧ್ಯತೆಯೂ ಇರುತ್ತದೆ.
ಇದನ್ನು ತಪ್ಪಿಸಲೆಂದೇ ಐಆರ್‌ಸಿಟಿಸಿ ತನ್ನ ಪೋರ್ಟಲ್‌ನಲ್ಲಿ ಹೊಸ ಫೀಚರ್ ಹೊರತಂದಿದ್ದು, ಪ್ರಯಾಣಿಕರ ವಿವರಗಳನ್ನು ಮೊದಲೇ ಸೇವ್ ಮಾಡಿ ಇಟ್ಟುಕೊಳ್ಳಬಹುದಾಗಿದೆ. ಐಆರ್‌ಸಿಟಿಸಿಗೆ ಲಾಗ್ ಇನ್ ಆಗುತ್ತಲೇ, ಟಿಕೆಟ್ ಬುಕ್ ಮಾಡುವ ವೇಳೆ ನಿಮ್ಮ ವಿವರಗಳನ್ನು ಭರ್ತಿ ಮಾಡಬೇಕಾದ ಅಗತ್ಯ ಇದರಿಂದ ತಪ್ಪುತ್ತದೆ.
ಮುಂದಿನ ಬಾರಿ ಟಿಕೆಟ್ ಬುಕ್ ಮಾಡುವಾಗ ನೀವು ಅದಾಗಲೇ ಸೇವ್ ಮಾಡಲಾಗಿರುವ ಈ ವಿವರಗಳನ್ನು ಕ್ಲಿಕ್ ಮಾಡಿ ಆಯ್ಕೆ ಮಾಡಬಹುದಾಗಿದೆ. ಹೀಗೆ ಮಾಡಿದಲ್ಲಿ ಪ್ರಯಾಣಿಕರ ವಿವರಗಳು ತನ್ನಿಂತಾನೇ ಭರ್ತಿಯಾಗುತ್ತದೆ. ಒಂದು ಬಾರಿ ಪೇಮೆಂಟ್ ಮೋಡ್ ತಲುಪಿದಲ್ಲಿ, ಅಲ್ಲಿಂದ ಆಚೆ ಯುಪಿಐ ಅಥವಾ ಡೆಬಿಟ್ ಕಾರ್ಡ್ ಬಳಸಿ ಟಿಕಟ್ ಬುಕ್ ಮಾಡಬಹುದು. ಹೀಗೆ ಮಾಡುವುದರಿಂದ ನೀವು ತ್ವರಿತವಾಗಿ ಹಾಗೂ ಸುಲಭವಾಗಿ ಐಆರ್‌ಸಿಟಿಸಿ ಪೋರ್ಟಲ್‌ನಲ್ಲಿ ಟಿಕೆಟ್ ಬುಕ್ ಮಾಡಬಹುದು.
ಮಾರ್ಚ್ 2020ರಿಂದ ಕೋವಿಡ್ ಕಾರಣದಿಂದಾಗಿ ಸ್ತಬ್ಧಗೊಂಡಿದ್ದ ಬಹುತೇಕ ರೈಲುಗಳ ಸಂಚಾರವು ನವೆಂಬರ್‌ನಿಂದ ಪೂರ್ಣ ಪ್ರಮಾಣದಲ್ಲಿ ಮರು ಆರಂಭಗೊಂಡಿದೆ ಎಂಬುದನ್ನು ಪ್ರಯಾಣಿಕರು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ.