ಬಳ್ಳಾರಿ : ಪ್ರಸಕ್ತ ಸಾಲಿನ ಸರ್ಕಾರಿ ಹಾಗೂ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ವಿವಿಧ ವೃತ್ತಿಗಳಿಗೆ ಪ್ರವೇಶಕ್ಕಾಗಿ ಮೆರಿಟ್-ಕಮ್-ರಿಸರ್ವೇಶನ್ ಆಧಾರದ ಮೇಲೆ ಬಳ್ಳಾರಿ ಜಿಲ್ಲೆಯಲ್ಲಿ ಬರುವ ಸಂಸ್ಥೆಗಳಲ್ಲಿ ಆನ್‍ಲೈನ್ ಮೂಲಕ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಆಧಾರ್ ಕಾರ್ಡ್, ಹೈಕ(371ಜೆ) ಪ್ರಮಾಣಪತ್ರ ಮತ್ತು ಟಿಸಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಕನ್ನಡ ಹಾಗೂ ಗ್ರಾಮೀಣ ಪ್ರಮಾಣ ಪತ್ರಗಳು ಹಾಗೂ ಇನ್ನೀತರ ದಾಖಲೆಗಳೊಂದಿಗೆ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಅರ್ಹ ಆಸಕ್ತ ಅಭ್ಯರ್ಥಿಗಳು ಬಳ್ಳಾರಿಯ ಕಂಟೋನ್ಮೆಂಟ್ ಪ್ರದೇಶದ ರೇಡಿಯೋ ಪಾರ್ಕ್ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜೂ.03 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಟಾಟಾ ಉದ್ಯೋಗ ಯೋಜನೆಯಡಿ ಅನುಷ್ಟಾನಗೊಳಿಸಿರುವ 03 ಮತ್ತು 10 ದೀರ್ಘಾವಧಿಯ ವೃತ್ತಿಗಳಿಗೆ ಆನ್‍ಲೈನ್‍ನಲ್ಲ್ಲಿ ಮೊದಲ ಆದ್ಯತೆ ಮೇರೆಗೆ ನೇರವಾಗಿ ಪ್ರವೇಶ ಮಾಡಿಕೊಳ್ಳಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬಳ್ಳಾರಿ ಹಾಗೂ ಹತ್ತಿರದ ಸರ್ಕಾರಿ ಐಟಿಐ ಗೆ ಭೇಟಿ ನೀಡಿ ವಿಚಾರಿಸಬಹುದು ಅಥವಾ ದೂ.08392-294527, ಮೊ.9902351985, 9448421922 ಗೆ ಸಂಪರ್ಕಿಸಬಹುದು.